ಈರುಳ್ಳಿ ಆಮದಿಗೆ ಕೇಂದ್ರ ನಿರ್ಧಾರ: ಆಫ್ಘನ್, ಈಜಿಪ್ಟ್, ಟರ್ಕಿ, ಇರಾನ್​ನಿಂದ ಖರೀದಿ


ನವದೆಹಲಿ: ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದ್ದು, ಕೆಲವೆಡೆ ಪ್ರತಿ ಕೆ.ಜಿ ಈರುಳ್ಳಿ -ಠಿ; 80 ತಲುಪಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಫ್ಘಾನಿಸ್ತಾನ, ಈಜಿಪ್ಟ್, ಟರ್ಕಿ ಮತ್ತು ಇರಾನ್​ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆೆ. ಮೊದಲ ಹಂತದಲ್ಲಿ 80 ಕಂಟೇನರ್ ಮತ್ತು ನಂತರದಲ್ಲಿ 100 ಕಂಟೇನರ್ ಈರುಳ್ಳಿ ಆಮದಿಗೆ ಕ್ರಮವಹಿಸುವಂತೆ ಈ ದೇಶಗಳಲ್ಲಿರುವ ಭಾರತದ ದೂತಾವಾಸಗಳಿಗೆ ಸೂಚಿಸಲಾಗಿದೆ ಎಂದು ತಿಳಿದಿಬಂದಿದೆ.

ಈರುಳ್ಳಿ ಕೊರತೆಯಿಂದಾಗಿ ಮತ್ತೆ ಬೆಲೆ ಏರಿಕೆಯಾಗುತ್ತಿರುವುದು ಹಾಗೂ ದೇಶಿಯ ಪೂರೈಕೆಯಲ್ಲಿ ಕುಂಠಿತವಾಗಿರುವ ಬಗ್ಗೆ ಅಂತರ್ ಸಚಿವಾಲಯ ಸಮಿತಿ ಸಭೆಯಲ್ಲಿ ರ್ಚಚಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ತಂಡವೊಂದು ನಾಸಿಕ್​ಗೆ ತೆರಳಿ ಈರುಳ್ಳಿ ಸಂಗ್ರಹದ ಬಗ್ಗೆ ಮಾಹಿತಿ ಪಡೆದು ಸುತ್ತಮುತ್ತಲ ರಾಜ್ಯಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ನಿರ್ವಹಿಸಲಿದೆ. ಈಗಾಗಲೇ ಎರಡು ತಂಡಗಳು ಕರ್ನಾಟಕ ಮತ್ತು ರಾಜಸ್ಥಾನಕ್ಕೆ ತೆರಳಿದ್ದು, ಅಲ್ಲಿರುವ ಈರುಳ್ಳಿ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸುತ್ತಿವೆ.

ಬೆಲೆ ಇಳಿಕೆ, ಕಣ್ಣೀರು ತರಿಸಿದ ಈರುಳ್ಳಿ

ಹುಬ್ಬಳ್ಳಿ /ಬೆಳಗಾವಿ: ನೆರೆಯಿಂದ ಬೆಳೆ ಹಾಳಾಗಿ ಕಂಗಾಲಾಗಿದ್ದ ರೈತರು, ಉಳ್ಳಾಗಡ್ಡಿ ಧಾರಣೆ ಕುಸಿತದಿಂದ ಮತ್ತಷ್ಟು ತತ್ತರಿಸಿದ್ದಾರೆ. ಕ್ವಿಂಟಾಲ್​ಗೆ -ಠಿ; 2300ರಿಂದ -ಠಿ; 3000ವರೆಗೆ ವ್ಯಾಪಾರಿಗಳು ದರ ನಿಗದಿಪಡಿಸಿದ್ದು, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಿಂದ ಆಗಮಿಸಿರುವ ರೈತರು ಈರುಳ್ಳಿಗೆ ತಕ್ಕ ಬೆಲೆ ಸಿಗದೆ ಹೈರಾಣಾಗಿದ್ದಾರೆ. ಬೆಳಗಾವಿ ಎಪಿಎಂಸಿಯಲ್ಲಿ ಇದೇ ಮೊದಲ ಬಾರಿಗೆ 65 ಸಾವಿರ ಕ್ವಿಂಟಾಲ್​ನಷ್ಟು ಈರುಳ್ಳಿ ವಹಿವಾಟು ನಡೆದಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ.

ನವೀನ ಹಳೆಯದು