ಮುಧೋಳ : ಕಳ್ಳನ ಬಂಧನ: ದೋಚಿದ್ದ ಚಿನ್ನದ ಮೌಲ್ಯವೆಷ್ಟು ಗೊತ್ತೇ?


ಬಾಗಲಕೋಟೆ: ಜಿಲ್ಲೆಯ ಕೊಣ್ಣೂರ ಮತ್ತು ಮುಧೋಳ ಶಹರದಲ್ಲಿ ನಡೆದ ಕಳ್ಳತನ ಆರೋಪದಡಿ ಲೋಕೇಶ ರಾವಸಾಬ ಸುತಾರ ಎಂಬ ಆರೋಪಿಯನ್ನು ಬಂಧಿಸಿ ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ  ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.

ಮಿರಜ ತಾಲೂಕಿನ ಲಿಂಗನೂರು ಗ್ರಾಮದ ಲೋಕೇಶ ಸುತಾರನ್ನು ಮಂಗಳವಾರ ದಸ್ತಗಿರಿ ಮಾಡಿ ಆರೋಪಿಯಿಂದ ಒಟ್ಟು 10 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಸುಮಾರು 501.5 ಗ್ರಾಂ ಚಿನ್ನಾಭರಣ ಹಾಗೂ 690ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಒಂದು ಹೋಂಡಾ ಆಕರ್ಡ ಕಾರ ಹಾಗೂ ರಾಯಲ್ ಎನ್‌ಫೀಲ್ಡ್ ಬುಲೋಟ್ ವಶಪಡಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನವೀನ ಹಳೆಯದು