ಉಕ್ಕಿ ಹರಿಯುವ ಘಟಪ್ರಭೆಗೆ ಧುಮುಕಿದ ಯುವಕ: ವಿಡಿಯೊ ವೈರಲ್


ಮುಧೋಳ: ರಸ್ತೆ ಮಧ್ಯೆಯಿಂದ ಓಡಿ ಬರುವ ಯುವಕನೊಬ್ಬ ಪಲ್ಟಿ ಹೊಡೆದು ಉಕ್ಕಿ ಹರಿಯುವ ಘಟಪ್ರಭಾ ನದಿಗೆ ಹಾರುವ ವಿಡಿಯೊ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಧೋಳ-ಯಾದವಾಡ ನಡುವಿನ ಘಟಪ್ರಭಾ ಸೇತುವೆಯ ಮೇಲೆ ಯುವಕ ಈ ದುಸ್ಸಾಹಸ ಮಾಡಿದ್ದಾನೆ.

ನದಿಗೆ ಹಾರಿದ ಯುವಕನ ಸ್ಥಿತಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ನದಿಗೆ ಧುಮುಕಿದ ಯುವಕ ಮತ್ತು ಅದನ್ನು ವಿಡಿಯೊ ಮಾಡಿದವರ ಹುಡುಕಾಟದಲ್ಲಿ ಮುಧೋಳ ಪೊಲೀಸರು ತೊಡಗಿದ್ದಾರೆ.

ನವೀನ ಹಳೆಯದು