ಮುಧೋಳ: ನಗರದ ಭಜಂತ್ರಿ ಓಣಿಯಲ್ಲಿ 10 ದಿನದ ಹಸುಳೆಯನ್ನೇ 30 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪ್ರಕರಣ ನಡೆದಿದೆ.
ಮೂವರು ಹೆಣ್ಣು ಮಕ್ಕಳಾಗಿದ್ದರೂ ಗಂಡುಮಗು ಇಲ್ಲವೆಂದು ಕೊರಗುತ್ತಿದ್ದ ವ್ಯಕ್ತಿಯೊಬ್ಬ 10 ದಿನದ ಮಗುವನ್ನು 30 ಸಾವಿರ ರೂಪಾಯಿಗೆ ಖರೀದಿಸಿ ತಂದು ಸಾಕುತ್ತಿರುವುದು ಗೊತ್ತಾಗಿದೆ.
ಅಕ್ರಮವಾಗಿ ಗಂಡು ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಗಲಕೋಟೆ ರಬಕವಿ ಮೂಲದ ಮಹಿಳೆಯಿಂದ ವ್ಯಕ್ತಿ ಮಗುವನ್ನು ಖರೀದಿಸಿ ಅಕ್ರಮವಾಗಿ ಸಾಕುತ್ತಿರುವ ಮಾಹಿತಿ ಗೊತ್ತಾಗಿದೆ. ಮೂವರು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕೆಂಬ ಕಾರಣಕ್ಕೆ ಮಗುವನ್ನು ಖರೀದಿಸಲಾಗಿದೆ ಎಂದು ವ್ಯಕ್ತಿ ಹೇಳಿದ್ದು, ಮಕ್ಕಳ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.