ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ್ತು ಮುಧೋಳ ತಾಲೂಕುಗಳ ಅರಣ್ಯ ಪ್ರದೇಶಗಳಲ್ಲಿ ಚಿಂಕಾರಾ ಇರುವಿಕೆಯ ಬಗ್ಗೆ ಕೆಲವು ವರದಿಗಳಿದ್ದವು. ಹಿಂದಿನ ಲಭ್ಯ ದಾಖಲೆಗಳ ಪ್ರಕಾರ ಚಿಂಕಾರವು ಲಭ್ಯವಿರುವ ಪ್ರದೇಶಗಳ ವ್ಯಾಪ್ತಿಯು ಕೃಷ್ಣ ನದಿಯ ಉತ್ತರ ಭಾಗದ ಪ್ರದೇಶಗಳಿಂದ 16ಲಿ ಉತ್ತರ ಅಕ್ಷಾಂಶದವರೆಗೆ ಕಂಡುಬರುತ್ತಿದ್ದವು. ಇವುಗಳು ಮಲಪ್ರಭಾ ನದಿಯ ಎಡದಂಡೆಯ ಮೇಲೆ ಮಾತ್ರ ಕಂಡು ಬರುತ್ತಿದ್ದು ಮೈನೂರು ರಾಜ್ಯ ಪ್ರದೇಶಗಳಲ್ಲಿ ಕಂಡುಬರುವುದುರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕೇವಲ ಕೆಲವೇ ಕೆಲವು ಜನರಿಗೆ ಹಳೆ ಮೈಸೂರು/ ಈಗಿನ ಕರ್ನಾಟಕ ರಾಜ್ಯದಲ್ಲಿ ಚಿಂಕಾರಾದ ಲಭ್ಯತೆಯ ಬಗ್ಗೆ ಮಾಹಿತಿ ಇತ್ತು. ಕಾರಣ ಅವುಗಳ ಸಂಖ್ಯೆ ಕಡಿಮೆಯಿದ್ದು ಈ ಪ್ರಾಣಿಗಳು ತುಂಬಾ ನಾಚಿಕೆ ಸ್ವಭಾವವನ್ನು ಹೊಂದಿವೆ. ನಂತರ 50 ರಿಂದ 60 ರ ದಶಕದಲ್ಲಿ ಎಲ್ಲ ಹಳ್ಳಿ ಜನರಿಗೆ ಇವುಗಳ ಇರುವಿಕೆಯು ತಿಳಿದು ಬಂದಿದ್ದು, ಅವುಗಳು ಅವರುಗಳ ಜೀವನದ ಒಂದು ಭಾಗವಾಗಿದ್ದವು.
ಚಿಂಕಾರವು ಅರಣ್ಯ ಪ್ರದೇಶಗಳಲ್ಲದೆ ಅರಣ್ಯ ಗಡಿ ಪ್ರದೇಶದ ರೈತರ ಜಮೀನುಗಳಲ್ಲಿಯೂ ಸಹ ಕಂಡು ಬರುತ್ತಿದ್ದವು ಮತ್ತು ಅವುಗಳು ರೈತರ ಸಾಕು ಪ್ರಾಣಿಗಳೊಂದಿಗೆ ಬೆರೆತು ಹೋಗಿದ್ದವು.
1970 ರ ನಂತರದಲ್ಲಿ ಚಿಂಕಾರಾ ಎಂಬ ಆಕರ್ಷಿಣೀಯ ಪ್ರಾಣಿಯು ಮುಖ್ಯವಾಗಿ ಅವು ಕಂಡುಬರುತ್ತಿದ್ದ ತುಂಗಭದ್ರಾ ಮತ್ತು ಕೃಷ್ಣಾ ನದಿ ದಂಡೆಗಳ ಉತ್ತರ ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿ ಪ್ರದೇಶಗಳಾದ ರಾಯಚೂರು, ಕೊಪ್ಪಳ, ಗದಗ, ಕಲಬುರ್ಗಿ, ಯಾದಗಿರಿ ಇತರೆ ಜಿಲ್ಲೆಗಳಲ್ಲಿ ಅವು ಕಣ್ಮರೆಯಾಗಿದ್ದವು. 1980 ಮತ್ತು 1990 ರ ದಶಕಗಳಲ್ಲಿ ನರಿಗಳ ನಿರಂತರವಾದ ಅಧ್ಯಯನದ ಸಮಯದಲ್ಲಿಯೂ ಸಹ ಚಿಂಕಾರಾದ ಇರುವಿಕೆಯ ಬಗ್ಗೆ ಯಾವುದೇ ಕುರುಹುಗಳು ದೊರೆಯಲಿಲ್ಲ. ಆದ್ದರಿಂದ ಚಿಂಕಾರಾದ ಸಂತತಿಯು ನಾಶವಾಗಿದೆ ಎಂದು ಭಾವಿಸಲಾಗಿತ್ತು.
ಕೇಲವು ವರ್ಷಗಳ ಹಿಂದೆ ಕಾಡುಗಳಲ್ಲಿ ಕುರಿಗಳನ್ನು ಮೇಯಿಸಲು ಹೋದ ಕುರಿಗಾರರಿಗೆ ಚಿಂಕಾರಾದ ಮರಿಗಳು ಕಂಡುಬಂದವು. ಇವುಗಳನ್ನು ಜನರು ಕೃಷ್ಣ ಮೃಗಗಳೆಂದು ತಪ್ಪು ಭಾವಿಸಿದ್ದರು. ಆದರೆ ಬಾಗಲಕೋಟೆ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರಾದ ಶ್ರೀ ಎಂ. ಆರ್. ದೇಸಾಯಿಯವರಿಗೆ ಮರಿಗಳು ಆಕಸ್ಮಿಕವಾಗಿ ಕಂಡುಬಂದು ಅವುಗಳನ್ನು ಧಾರ್ಮಿಕ ಪ್ರದೇಶಗಳಲ್ಲಿ ನಿರ್ವಹಣೆಗಾಗಿ ಕೊಟ್ಟಿದ್ದು, ಅಲ್ಲಿ ಅವುಗಳನ್ನು ಕಂಡಾಗ, ಬೀಳಗಿ ಮತ್ತು ಯಡಹಳ್ಳಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿಂಕಾರಾದ ಇರುವಿಕೆಯ ಬಗ್ಗೆ ಕುರುಹುಗಳು ಸಿಕ್ಕಿದ್ದುದರಿಂದ ಅವುಗಳ ಛಾಯಾಚಿತ್ರಗಳನ್ನು ವನ್ಯಜೀವಿ ತಜ್ಞರಾದ ಶ್ರೀ ಎ. ಜೆ. ಬಿ. ಜಾನಸಿಂಗ್ ರವರಿಗೆ ಕಳುಹಿಸಿಕೊಟ್ಟು ಅವರಿಂದ ಈ ಪ್ರಾಣಿಯು ಚಿಂಕಾರಾ ಎಂದು ದೃಢಪಡಿಸಿಕೊಳ್ಳಲಾಯಿತು. ಈ ಒಂದು ಕುರುಹು ಅರಣ್ಯ ಪ್ರದೇಶಗಳಲ್ಲಿ ಕ್ಯಾಮರಾ ಟ್ರ್ಯಾಪ್‍ಗಳನ್ನು ಅಳವಡಿಸಿ, ವ್ಯವಸ್ಥಿತ ರೀತಿಯಲ್ಲಿ ಅವುಗಳ ನಿರಂತರ ಹುಡುಕಾಟದಿಂದ ಚಿಂಕಾರಾದ ಛಾಯಾ ಚಿತ್ರಗಳನ್ನು ಪಡೆಯುವಲ್ಲಿ ಯಶಸ್ಸನ್ನು ತಂದುಕೊಟ್ಟಿತು. ಆಶ್ಚರ್ಯಕರ ಸಂಗತಿ ಏನೆಂದರೆ ಕಾಡಿನಲ್ಲಿ ಅವು ವಿರಳವಾಗಿ ಲಭ್ಯವಿದ್ದರೂ ಉತ್ತಮ ಸಂತತಿಯನ್ನು ಹೊಂದಿದ್ದವು. ಹಿಂದಿನ 30 ವರ್ಷಗಳಲ್ಲಿ ಸಂತತಿಯೂ ನಾಶವಾಗಿದೆ ಎಂದುಕೊಂಡಿದ್ದ ಚಿಂಕಾರಾದ ಪುನರ ಆವಿಷ್ಕಾರವು ವನ್ಯಜೀವಿ ವಿಜ್ಞಾನ ಮತ್ತು ತಂತ್ರಜಾನದ ಸರಿಯಾದ ಬಳಕೆಯ ಫಲಶೃತಿಯಾಗಿದೆ. ಈ ಪುನರ್ ಆವಿಷ್ಕಾರವು ಬೀಳಗಿ ಮತ್ತು ಯಡಹಳ್ಳಿ ಸುತ್ತಲಿನ ಅರಣ್ಯ ಪ್ರದೇಶವನ್ನು ಚಿಂಕಾರಾ ಅಭಯಾರಣ್ಯವೆಂದು ಘೋಷಿಸಲು ಪ್ರಸ್ತಾವನೆಯನ್ನು ಕಳುಹಿಸುವಂತೆ ಎಡೆ ಮಾಡಿಕೊಟ್ಟಿತು.
ಚಿಂಕಾರ-ಮರು ಶೋಧನೆ (ಸಂಶೋಧನೆ) :
ಚಿಂಕಾರಾವು ಬಾಗಲಕೋಟ ಜಿಲ್ಲೆಯ ಬೀಳಗಿ ಮತ್ತು ಮುಧೋಳದಲ್ಲಿ (ತಾಲೂಕು) ವಾಸವಿರುವ ದಾಖಲೆಗಳು ಸ್ವಲ್ಪಮಟ್ಟಿಗೆ ಇದೆ. ಹಳೆಯ ದಾಖಲೆಗಳ ಪ್ರಕಾರ ಚಿಂಕಾರಾÀಗಳು ಕೃಷ್ಣ ನದಿಯ ದಕ್ಷಿಣ ಭಾಗz 160À ಉತ್ತರ ಅಕ್ಷಾಂಶದವರೆಗೂ ಹರಡಿಕೊಂಡಿದೆ. ಇವುÀಗಳು ಮಲಪ್ರಭಾ ನದಿಯ ಎಡ ದಂಡೆಯಲ್ಲಿ ವಾಸವಿದ್ದು ಹಳೆ ಮೈಸೂರಿನಲ್ಲಿ ವಾಸವಿರಲಿಲ್ಲ. ಕೆಲವರು ಮಾತ್ರ ಚಿಂಕಾರಗಳು ಹಳೆ ಮೈಸೂರು ಅಥವಾ ಈಗೀನ ಕರ್ನಾಟಕದಲ್ಲಿ ಇರಬಹುದು ಎಂದು ಊಹಿಸಿದ್ದರು. ಕಾರಣ ಇವು ಸಣ್ಣ ಗುಂಪಿನಲ್ಲಿರುವ ಬಹಳ ನಾಚಿಕೆ ಸ್ವಭಾವದ ಪ್ರಾಣಿಯಾಗಿರುತ್ತವೆ. ಆದರೆ 1950-60 ರಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಇವು ದಿನನಿತ್ಯ ಜೀವನದಲ್ಲಿ ಬೆರೆತುಹೋಗಿದ್ದವು ಮತ್ತು ಇವುಗಳ ಇರುವಿಕೆ ಹಾಗು ಅವುಗಳು ಕಂಡುಬರುವುದು ಸರ್ವೆಸಾಮಾನ್ಯವಾಗಿತ್ತು. ಗ್ರಾಮಸ್ಥರು ಇವುಗಳನ್ನು ಕಾಡುಗಳಲ್ಲಿ ಹಾಗೂ ಕೃಷಿ ಭೂಮಿಯಲ್ಲಿ ನೋಡುವುದು ಸಹಜವಾಗಿತ್ತು. ಚಿಂಕಾರಗಳು ಮೊದಲು ಕಂಡುಬರುತ್ತಿದ್ದ ಪ್ರದೇಶಗಳಾದ ಕರ್ನಾಟಕ ರಾಜ್ಯದ ಗುಂಗಭದ್ರ, ಕೃಷ್ಣ ನದಿಯ ದಂಡೆಯ ಹಾಗೂ ಜಾಸ್ತಿ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಗದಗ, ಕಲಬುರಗಿ, ಯಾದಗೀರಿ ಇತ್ಯಾದಿಗಳಲ್ಲಿ 1970 ರ ನಂತರದಲ್ಲಿ ಮಾಯವಾಗಿದ್ದವು.ನಿರಂತರ ಸಂಶೋಧನೆಯಿಂದ 1980 ರಲ್ಲಿ ಭಾರತದ ತೋಳಗಳ ಬಗ್ಗೆ ಹಾಗೂ 1990 ರಲ್ಲಿ ಚಿಂಕಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಾಧ್ಯವಾಗಲಿಲ್ಲ. ಆದ್ದರಿಂದ ಇವುಗಳು ಸಂಪೂರ್ಣವಾಗಿ ಕರ್ನಾಟಕದಲ್ಲಿ ಅಳಿದುಹೋಗಿವೆ ಎಂದು ಭಾವಿಸಲಾಯಿತು.ಆದರೆ ಈಗ ಇವುಗಳು ಬೀಳಗಿ ಹಾಗೂ ಮುಧೋಳ ವಲಯದ ಮುಳ್ಳುಗಂಟಿ ಮತ್ತು ಪೊದೆಗಳ ಕಾಡುಗಳಲ್ಲಿ ಪತ್ತೆಯಾಗಿವೆ. ಇವುಗಳು ಸಣ್ಣ ಗುಂಪಿನಲ್ಲಿ ಇರುವ ಸಣ್ಣ ಸುಂದರವಾದ ನಾಚಿಕೆ ಸ್ವಭಾವದ ಪ್ರಾಣಿ. ಆದಕಾರಣ ಇವುಗಳನ್ನು ಸಂರಕ್ಷಣೆ ಮಾಡುವತ್ತ ಸೂಕ್ತ ಗಮವ ಹರಿಸಲು ಇದು ಸರಿಯಾದ ಸಮಯವಾಗಿದೆ.
ಪೊದೆಕಾಡು-ವಿಶಿಷ್ಟ ಪರಿಸರ-ಸಂರಕ್ಷಣೆ :ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡುಗಳ ಹಾಗೆ ಒಣ ಎಲೆ ಉದುರುವ ಹಾಗೂ ಪೊದೆಗಳನ್ನೊಳಗೊಂಡ ಕಾಡುಗಳು ಸಹ ಒಂದು ರೀತಿಯ ವಿಶಿಷ್ಟವಾದ ಪರಿಸರವನ್ನು ಹೊಂದಿರುತ್ತವೆ. ಅದರಲ್ಲಿ ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ಪೊದೆ ಕಾಡುಗಳಲ್ಲಿ ವಿಶಿಷ್ಟವಾದ ಮರಗಳ (ಸಸ್ಯ ಸಂಪನ್ಮೂಲದ ಜೊತೆಗೆ ಪ್ರಾಣಿ ಸಂಪನ್ಮೂಲ ಯಥೇಛ್ಚವಾಗಿ ಕಂಡುಬರುತ್ತವೆ.ಭಾರತದಲ್ಲಿ ಒಟ್ಟಾರೆ 38% ಉಷ್ಣವಲಯ, ಸಮಶೀತೋಷ್ಣ ವಲಯ ಕಾಡುಗಳು ಇವೆ (ಆixiಣ 1997). ಬೀಳಗಿ ಹಾಗೂ ಮುಧೋಳ ವಲಯದ ಪೊದೆ ಕಾಡನ್ನು ಚಾಂಪಿಯನ್ ಹಾಗೂ ಸೇತ್ (1968) ಪ್ರಕಾರ ವರ್ಗೀಕರಿಸಲಾಗಿದೆ.
ಸಿಂಹಾವಲೋಕನ:ಮೂರು ದಶಕಗಳಿಂದಲೂ ಬಾಗಲಕೋಟೆ ಜಿಲ್ಲೆಯ ಬೀಳಗಿ ಹಾಗೂ ಮುಧೋಳ ವಲಯದ ಪೊದೆ ಕಾಡನ್ನು ವನ್ಯಜೀವಿ ಅಭಯಾರಣ್ಯ ಎಂದು ಪರಿಗಣಿಸಬೇಕೆಂದು ಮೊದಲಿನಿಂದಲೂ ಪ್ರಸ್ತಾಪದಲ್ಲಿವೆ, ಪ್ರಕೃತಿ ಪ್ರಿಯರ ಹಾಗೂ ಸ್ಥಳೀಯ ಜನರ ಪರಿಶ್ರಮದಿಂದ ಹಾಗೂ ಅವರ ಪ್ರೀತಿಯಿಂದ ಈ ಹೋರಾಟವು 1970 ರಲ್ಲಿ ಶುರುವಾಯಿತು. ಎಂಬತ್ತರ ದಶಕದಲ್ಲಿ Sಣಚಿಣe ತಿiಟಜ ಟiಜಿe ಚಿಜvisoಡಿಥಿ boಚಿಡಿಜ ಬೀಳಗಿ ವಲಯವನ್ನು ಓಚಿಣuಡಿe ಡಿeseಡಿve ಎಂದು ಘೋಷಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (ವನ್ಯಜೀವಿ ಸಂರಕ್ಷಣೆ) ಬೆಂಗಳೂರು ರವರು ಪತ್ರÀ ಸಂಖ್ಯೆ: ಃಆಐಅಏ(Wಐ)ಅಖ-29/85-86 ಜಣಜ: 27-03-1986 ರ ಪ್ರಕಾರ ಬಾಗಲಕೋಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬೀಳಗಿ ವಲಯದ ಪೊದೆ ಕಾಡಿನಿಂದ ಕೂಡಿದ ಅರಣ್ಯ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದರು. ಅದರಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟೆಯವರು ಬೀಳಗಿ ವಲಯದ ಸಂಪೂರ್ಣ ಮಾಹಿತಿ ವನ್ಯಜೀವಿಗಳನ್ನು ಒಳಗೊಂಡಂತೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ ಸಂರಕ್ಷಣೆ) ಬೆಂಗಳೂರು ರವರಿಗೆ ಪತ್ರ ಸಂಖ್ಯೆ: ಅ3/ಒISಅ/Wಐಈ/ಃಉಏ/85-86/88-89 ದಿನಾಂಕ:-08-1986 ರಂದು ಬೀಳಗಿ ವಲಯವನ್ನು ಸಂರಕ್ಷಿತ ಪ್ರದೇ±ದÀ ಪೊದೆಗಳ ಕಾಡುಗಳ ಪಟ್ಟಿಯಲ್ಲಿ ಸೇರಿಸತಕ್ಕದ್ದು ಎಂದು ವರದಿ ಮಾಡಲಾಯಿತು. ಇದರ ಒಂದು ಪ್ರತಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ರವರಿಗೆ ಮಾಹಿತಿಗಾಗಿ ಕಳುಹಿಸಲಾಯಿತು. ಅದರಂತೆ ಅಭಯಾರಣ್ಯ ಎಂದು ಪ್ರಸ್ತಾಪಿತ ಪ್ರದೇಶವನ್ನು ವೀಕ್ಷಿಸಲು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ ಸಂರಕ್ಷಣೆ) ಬೆಂಗಳೂರು ರವರಿಗೆ ಜೊತೆಗೆ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ, ಬೆಳಗಾವಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟ ದಿನಾಂಕ: 07-06-1989 ಸ್ಥಳಕ್ಕೆ ಭೇಟಿ ನೀಡಿ ಪ್ರಸ್ತಾವನೆ ಕಳುಹಿಸಲು ಮಾರ್ಗದರ್ಶ ನೀಡಲಾಯಿತು. ಅದರಂತೆ ಸಂಕ್ಷಿಪ್ತ ಮಾಹಿತಿಯೊಂದಿಗೆ, ಜೊತೆಗೆ ನಕ್ಷೆ (1:50000Sಛಿಚಿಟe)40Sq ಞm ನಾಲ್ಕು ಪ್ರತಿಯನ್ನು ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ, ಬೆಳಗಾವಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಯಿತು. ಪತ್ರ ಸಂಖ್ಯೆ: ಅ3/ಒISಅ/WಐP/ಃಉಏ/85-86/88-89 ದಿನಾಂಕ: 31-08-1989. ಮುಂದುವರೆಸುತ್ತಾ, ಇನ್ನೊಂದು ಪತ್ರಸಂಖ್ಯೆ: ಅ3/ಒISಅ/WಐP/ಃಉಏ/85-86/88-89 ದಿನಾಂಕ: 06-01-1990 ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ, ಬೆಳಗಾವಿ ಯವರಿಗೆ ವಿನಂತಿ ಪತ್ರವನ್ನು ಅಂದರೆ ಬೀಳಗಿ ಹಾಗೂ ಮುಧೋಳದಲ್ಲಿ ಇರುವ ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಅರಕೇರಿ, ತೆಗ್ಗಿ, ಬಿಸನಾಳ, ಗುಲಬಲ, ಯದಹಳ್ಳಿ, ಅಮಲಜಾರಿ, ಮಿಲಿಗೇರಿ ಮತ್ತು ಹಲಗಲಿ 40 ಚದರ ಕಿಲೋಮೀಟರ್ ಅರಣ್ಯತ ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸಬೇಕೆಂದು ಕಳುಹಿಸಲಾಯಿತು. ಅದೇ ರೀತಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟ ರವರ ಪತ್ರ ಸಂಖ್ಯೆ: ಅ3/ಒISಅ/WಐP/ಃಉಏ/85-86/88-89 ದಿನಾಂಕ: 05-02-1990 ಬೀಳಗಿ ಹಾಗೂ ಮುಧೋಳ ವಲಯದ ವಲಯ ಅರಣ್ಯಾಧಿಕಾರಿಗಳಿಗೆ ಅಭಯಾರಣ್ಯದ ಸುತ್ತ ಸರ್ವೆ ನಕ್ಷೆ ಪ್ರಕಾರ ಕಲ್ಲಿನ ಗೋಡೆಗಳನ್ನು ನಿರ್ಮಿಸಲು ಆದೇಶಿಸಲಾಯಿತು. ಅದರಂತೆ ಕಲ್ಲಿನ ಗೋಡೆಗಳು ನಿರ್ಮಾಣವಾದವು ಅದರ ಜೊತೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟ ರವರು ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ, ಬೆಳಗಾವಿ ಇವರಿಗೆ ಪತ್ರ ಸಂಖ್ಯೆ: ಅ3/ಒISಅ/WಐP/ಃಉಏ/85-86/89-90 ದಿನಾಂಕ: 23-03-1990
ರಡಿ ಪತ್ರ ಬರೆದು ಹಾಗೂ ಡಾ|| ಎಂ. ಆರ್. ದೇಸಾಯಿ ಸಾ|| ಯಡಹಳ್ಳಿ ಗೌರವ ವನ್ಯಜೀವಿ ಪರಿಪಾಲಕರು, ಬಾಗಲಕೋಟೆ ಇವರಿಗೆ ಪತ್ರವನ್ನು ಲಗತ್ತಿಸಿ ಕಳುಹಿಸಲಾಯಿತು. ಈ ಪತ್ರದಲ್ಲಿ ಆ ಪ್ರದೇಶದ ಮುಖ್ಯ ಜೀವ ಸಂಪನ್ಮೂಲಗಳ ಮಾಹಿತಿ ಒಳಗೊಂಡಿತ್ತು.ಆರವತ್ತರ ದಶಕದಲ್ಲಿ ಬೀಳಗಿ ವಲಯದಲ್ಲಿ ಘಟಪ್ರಭಾ ನದಿಯ ಎಡ ದಂಡೆ ಕಾಲುವೆಯ ನಿರ್ಮಾಣ ಶುರುವಾಯಿತು. ಈ ಕಾಲುವೆಯು ಸಂಪೂರ್ಣ ಬೀಳಗಿ ವಲಯದ ಉದ್ದಕ್ಕೂ ನಿರ್ಮಾಣವಾಯಿತು. ಇದರಿಂದ ಇಲ್ಲಿರುವ ಸಸ್ಯ ಹಾಗೂ ಪ್ರಾಣಿಗಳಿಗೆ ಬಹಳ ನಷ್ಟ ಉಂಟಾಯಿತು. ಇದರಿಂದಾಗಿ ಮುಖ್ಯ ಮಾಂಸಾಹಾರಿ ಪ್ರಾಣಿಯಾದ ದೊಡ್ಡ ಬೆಕ್ಕುಗಳ ಗುಂಪಿಗೆ ಸೇರಿದ ಚಿರತೆ ಸಂಪೂರ್ಣವಾಗಿ ಅಳಿದುಹೋಯಿತು. ತೋಳಗಳÀ ಸಂಖ್ಯೆ ಕ್ಷೀಣಿಸಿ ಬಲು ಅಪರೂಪದ ಪ್ರಾಣಿಯಾಯಿತು. ಆಗಾಗ ಕತ್ತೆಕಿರುಬ ಕಾಣಲು ಸಿಗುತ್ತವೆ.ಮಧ್ಯ ಎಪ್ಪತ್ತರ ದಶಕದಲ್ಲಿ ಅರಣ್ಯ ಇಲಾಖೆಯವರು ಸಂರಕ್ಷಣೆಯ ಸಲುವಾಗಿ ಸುತ್ತಲೂ ತಂತಿಯನ್ನು ಹಾಕಿರದು. ಇದರಿಂದ ಒಳ್ಳೆ ಮರಗಳ ಬೆಳವಣಿಗೆ ಹಾಗೂ ಬಯಲು ಭೂಮಿ ಸಂಪೂರ್ಣವಾಗಿ ಹಸಿರಾಯಿತು. ಆದಕಾರಣ ಭೂಮಿಯಲ್ಲಿ ಮೊಟ್ಟಯಿಡುವ ಪಕ್ಷಿಗಳಿಗೆ ಸಹಾಯಕವಾಯಿತು.ಎಂಭತ್ತರ ದಶಕದಲ್ಲಿ ಸಂರಕ್ಷಣೆಯ ಮಹತ್ವ ಅರಿವಾಗಿ ಜನರಿಗೆ ಪ್ರಜ್ಞೆಯನ್ನು ಅರಿವನ್ನು ಬೆಳೆಸಲು ಆಂದೋಲನಗಳು ಶುರುವಾದವು. ಈ ಜಾಗದಲ್ಲಿ ಕಳ್ಳಬಟ್ಟಿಗಳು ಇದ್ದವು ಇವುಗಳಿಗೆ ಜಳಾವು ಕಟ್ಟಿಗೆ ಬಹುಮುಖ್ಯವಾಗಿ ಬೇಕಾಗಿತ್ತು. ಈ ಆಂದೋಲಗಳು ಜನರಿಗೆ ಪ್ರೇರಕವಾಗಿ ಕಳ್ಳಭಟ್ಟಿಗಳು ಕಡಿಮೆಯಾಗಿ ಹಾಗೂ ಇನ್ನೂ ಕೆಲವರು ಇದನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಹುಡುಕಿಕೊಂಡರು. ವನ್ಯಜೀವಿಗಳಿಗೆ ಹಾನಿ ಆಗುವುದು ಕೂಡ ಕಡಿಮೆಯಾಯಿತು. ಇದೇ ಸಮಯದಲ್ಲಿ ಗೋಮಾಳ ಹಾಗೂ ಜೌಗು ಪ್ರದೇಶದಲ್ಲಿ ಮುಳ್ಳು ಜಾಳಿಗಿಡಗಳನ್ನು ಯಥೇಚ್ಛವಾಗಿ ಬೆಳೆಸಲಾಯಿತು. ಇದರಿಂದ ಜನರಿಗೆ ಉರುವಲು ಕಟ್ಟಿಗೆಯ ಕೊರತೆ ನೀಗಿತು ಹಾಗೂ ಕಾಡಿನ ಮೇಲಿನ ಒತ್ತಡ ಕಡಿಮೆಯಾಯಿತು.ಕಾಲಾನಂತರ ಫಲವತ್ತಾದ ಭೂಮಿ ಹಾಗೂ ನದಿಗಳು ಜನಸಂಖ್ಯೆಯನ್ನು ಹೆಚ್ಚಿಸಿದವು. ಜನಸಂಖ್ಯೆಯ ಬೇಡಿಕೆಗಳನ್ನು ನೀಗಿಸಲು ಹಲವಾರು ಅಭಿವೃದ್ಧಿಪರ ಬೆಳವಣಿಗೆ ಕಾರ್ಯಕ್ರಮಗಳು ಮುಖ್ಯವಾದವು. 50 ವರ್ಷಗಳಿಂದ ಕಾಲುವೆಗಳು, ದಾರಿಗಳು, ವಿದ್ಯುತ್ ಕಂಬಗಳು ಹಾಗೂ ಕೇಂದ್ರಗಳು ನಿರ್ಮಾಣವಾದವು. ಸೇತುವೆಗಳು, ಸಕ್ಕರೆ ಕಾರ್ಖಾನೆಗಳು, ಸಿಮೆಂಟ ಕಾರ್ಖಾನೆಗಳು, ಇತ್ಯಾದಿ ಉದ್ದಿಮೆಗಳು ಎದ್ದು ನಿಂತವು. ಇವೆಲ್ಲರ ಬೆಳವಣಿಯಯಿಂದ ಅರಣ್ಯದ ಮೇಲೆ ದುಷ್ಪರಿಣಾಮ ಉಂಟಾಯಿತು.ಇವೆಲ್ಲದರ ಜೊತೆಗೆ ಇನ್ನೊಂದು ಮುಖ್ಯ ಬದಲಾವಣೆಯೇನೆಂದರೆ, ಕೃಷ್ಣಾ ನದಿ ಯೋಜನೆ ಸಲುವಾಗಿ ಹಲವಾರು ಹಳ್ಳಿಗಳನ್ನು ಸ್ಥಳಾಂತರಿಸಲಾಯಿತು. ಹೀಗೆ ಸ್ಥಳಾಂತರಿಸಿದ ಜಾಗಗಳು ಫಲವತ್ತಾದ ಕೃಷಿ ಭೂಮಿಗಳಾಗಿದ್ದವು. ಇದರಿಂದಾಗಿ ರೈತರು ತಮ್ಮ ಭಾರಿ ಗಾತ್ರದ ಫಲವತ್ತಾದ ಜಮೀನನ್ನು ಕಳೆದುಕೊಂಡರು. ಈ ಭೂಮಿಗಳು ಅವರ ಜೀವನದ ಮುಖ್ಯ ಆಧಾರವಾಗಿತ್ತು. ಇದನ್ನು ಕಳೆದುಕೊಂಡು ಇದರಿಂದ ಅರಣ್ಯ ಪ್ರದೇಶದ ಸಂಪತ್ತಿಗೆ, ಸಂಪನ್ಮೂಲಗಳ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಯಿತು.ಜನಸಂಖ್ಯೆ ಹಾಗೂ ಹಾಲು (ಹೈನು) ಉತ್ಪಾದನ ಜಾನುವಾರಗಳ ಸ್ಪೋಟದಿಂದ ಅವನತಿಯತ್ತ ಸಾಗುತ್ತಿದ್ದಅರಣ್ಯ ಮೇಲೆ ಇನ್ನೂ ಒತ್ತಡ ಬಿತ್ತು. ಇದರಿಂದಾಗಿ ಅರಣ್ಯ ಪರಿಸರವನ್ನು ಹೊಂದಿಕೊಂಡ ಸಸ್ಯ ಹಾಗೂ ಪ್ರಾಣಿಗಳು ವಿನಾಶದ ಅಂಚಿಗೆ ಬಂದು, ಕೆಲವು ಅಳಿದುಹೋದವು.ಒಂದು ಕಾಲದಲ್ಲಿ ಸ್ಥಳೀಯ ಪ್ರಾಣಿಯಾದ ಚಿರತೆ ಸಂಪೂರ್ಣವಾಗಿ ವಿನಾಶವಾಯಿತು. ಕಾಡುಹಂದಿ ಈಗ ಅಳುವಿನ ಅಂಚಿನಲ್ಲಿದೆ. ಪರಿಸರವನ್ನು ರಕ್ಷಿಸಲು ನೀಲಗಿರಿ ಮರಗಳನ್ನು ಬೆಳೆಸಲಾಯಿತು. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಮುಖ್ಯ ಸ್ಥಳೀಯ ಪಕ್ಷಿಗಳಾದ ನವಿಲು, ಉಡಿeಥಿ ಠಿಚಿಣಡಿiಜge, Sಚಿಟಿಜ gಟouse, ಕಿuiಟಟ ಇವುಗಳಿಗೆ ಮೊಟ್ಟೆಯಿಡಲು ಭೂಮಿ ಅವಶ್ಯಕ. ಇದಲ್ಲದೆ ಇವು ತುಂಬ ಕಷ್ಟಪಟ್ಟು ಇನ್ನುಳಿದ ಚಿಂಕಾರಗಳು ಅಲ್ಲಿ ಇಲ್ಲಿ ವಾಸಿಸತೊಡಗಿದವು. ಇದರಿಂದ ಚಿಂಕಾರಗಳು ಜೀವನ ನಡೆಸಲು ಬದಕಲು ಹೋರಾಡಬೇಕಾಯಿತು. ಇದನ್ನು ಉಳಿಸಲು ನಾವು ಎಚ್ಚತ್ತುಕೊಳ್ಳಬೇಕಾಗಿದೆ.
ಚಿಂಕಾರಗಳನ್ನು ಏಕೆ ಸಂರಕ್ಷಿಸಬೇಕು :ನಮಗೆ ಯಾವಾಗ ಚಿಂಕಾರದ ಸಣ್ಣ ಸಂಖ್ಯೆಯ ಬೇರೆ ಗುಂಪಿನಿಂದ ಎಷ್ಟು ದೂರ ಬೇರ್ಪಟ್ಟಿದೆ ಎಂಬುದು ತಿಳಿದಿಲ್ಲ. ಆದರೆ ಈ ಗುಂಪಿಗೆ ಹತ್ತಿರವಾದ ಗುಂಪು 250 ಕಿ.ಮೀ. ದೂರದಲ್ಲಿ ಭೀಮಾನದಿ ತೀರದಲ್ಲಿ ಉತ್ತರ ಮಹಾರಾಷ್ಟ್ರದಲ್ಲಿವೆ. ಈ ರೀತಿ ಬೇರ್ಪಟ್ಟಿದ್ದರಿಂದ ಇವುಗಳಿಂದ ಹೊಸ ತಳಿಯು ಸೃಷ್ಟಿಯಾಗಬಹುದೆಂದು ಊಹಿಸಬಹುದಾಗಿದೆ. ಇದರ ಸಲುವಾಗಿ ಇವುಗಳ ಸಂರಕ್ಷಣೆ ಬಹು ಮುಖ್ಯವಾಗಿದೆ. ಹಾಗೂ ವನ್ಯಜೀವಿ (ಸಂರಕ್ಷಣಾ)ನ ಕಾಯಿದೆ- 1972 ರ ಪ್ರಕಾರ ಚಿಂಕಾರಾವು Sಛಿheಜuಟe-I. ಪ್ರಾಣಿಗಳ ಪಟ್ಟಿಯಲ್ಲಿ ಬರುತ್ತದೆ., ಆದ್ದರಿಂದ ಇದನ್ನು ರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ.ಯಡಹಳ್ಳಿಯ ಅರಣ್ಯದಲ್ಲಿ ಚಿಂಕಾರ ಒಂದು ಮುಖ್ಯ ಪ್ರಾಣಿಯಾಗಿದ್ದು ಬಹಳ ಸಂಖ್ಯೆಯಲ್ಲಿ ಇದೆ. ಇವುಗಳಿಗೆ ಸರಿಯಾದ ರಕ್ಷಣೆಯನ್ನು ಒದಗಿಸಿದಲ್ಲಿ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣಬಹುದಾಗಿದೆ. ಇದರ ಜೊತೆಗೆ ವಾಸವಿದ್ದ ಸಂಪೂರ್ಣವಾಗಿ ಅಳಿದು ಹೋದ ಚಿರತೆಯನ್ನು ಮತ್ತೆ ಈ ಪರಿಸರದಲ್ಲಿ ತರಬಹುದಾಗಿದೆ. ಸಂತಾನೋತ್ಪತ್ತಿಯಲ್ಲಿರುವ ಸಾಕಷ್ಟು ಸಂಕ್ಯೆಯ ಚಿಂಕಾರಗಳು ಸಾಕಷ್ಟು ಕಾಣಿಸಿಕೊಂಡಿದ್ದರಿಂದ ಈ ಪ್ರದೇಶದಲ್ಲಿ ಇವುಗಳ ಇರುವಿಕೆಯು ಸ್ಪಷ್ಟವಾಗಿದೆ.
ಕ್ಯಾಮರಾ ಟ್ರಾಪ್‍ನಿಂದ ತೆಗೆದ ಛಾಯಾಚಿತ್ರಗಳು ಇವುಗಳ ಇರುವಿಕೆಯನ್ನು ದೃಢಪಡಿಸುತ್ತದೆ.
ಇವುಗಳು ಹಾಕಿರುವ ಹಿಕ್ಕೆಗಳು ಸರಣಿ ಬಹಳಷ್ಟು ಸೂಚಿಸಿರುವ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ.
ಸಣ್ಣ ಮರಿಗಳು ಸಹಾ ಈ ಅಭಯಾರಣ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇವುಗಳ ಛಾಯಾಚಿತ್ರಗಳು ¸ಹ ಲಭಿಸಿವೆ.
ಸತ್ತ ಪ್ರಾಣಿಗಳ ಕೋಡುಗಳು ಇವುಗಳ 25 ಸೆ.ಮೀ. ಸುಂದರ ಕೋಡುಗಳೂ ಛಾಯಾ ಚಿತ್ರದಲ್ಲಿ ಲಭಿಸಿದೆ.
ಸ್ಥಳಿಯ ಗ್ರಾಮಸ್ಥರ ಹೇಳಿಕೆ ಆಧಾರದ ಮೇಲೆ ಕೂಡ ಇವುಗಳ ಇರುವ ಆಧಾರವನ್ನು ಊಹಿಸಬಹುದಾಗಿದೆ
ಚಿಂಕಾರಗಳನ್ನು ದಿನಾಂಕ: 25-09 2014 ರಂದು ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂಧಿ ವರ್ಗದವರು ಇವುಗಳನ್ನು ನೋಡಿರುವುದು ಉಂಟು.
ಇಲಾಖೆಯ ವಾಚರ್‍ಗಳು ದಿನಾಂಕ: 21-11-2014 ರಂದು ಹಳ್ಳಿಗಳಲ್ಲಿ ನೋಡಿದ್ದರು.ಈ ದಿನದಿಂದ ಇನ್ನೊಬ್ಬರು ಕೂಡ ಚಿಂಕಾರವನ್ನು ನೋಡಿ ಛಾಯಾಚಿತ್ರವನ್ನು ತಗೆದಿರುವುದುಂಟು.
ಪ್ರಸ್ತಾಪಿತ ವನ್ಯಜೀವಿ ಅಭಯಾರಣ್ಯ :ಪ್ರಸ್ತಾಪಿತ ಅಭಯರಣ್ಯವು ಬೀಳಗಿಯ ಒಂಬತ್ತು ಹಳ್ಳಿಗಳನ್ನು ಒಳಗೊಂಡಿದೆ. ಹಾಗೂ ಮುಧೋಳ ವಲಯದ 2 ಹಳ್ಳಿಗಳನ್ನು ಒಳಗೊಂಡಿದ್ದು 9584.332 ಹೆ. ಅರಣ್ಯ ಪ್ರದೇಶವನ್ನು ಹೊಂದಿದೆ.ಈ ಪ್ರಸ್ತಾಪಿತ ಅಭಯಾರಣ್ಯವನ್ನು ಮಾನವನಿಂದ ಹಾಗೂ ಅವನ ಸಾಕು ಪ್ರಾಣಿಗಳಿಂದ ಸಂರಕ್ಷಿಸಬೇಕಾಗಿದೆ. ಇದನ್ನು ಚೈನ್‍ಲಿಂಕ್‍ಮೇಶ್ ಫೆನ್ಸಿಂಗ್ ಅಥವಾ ಇನ್ನಿತರ ವಿಧಾನಗಳಿಂದ ರಕ್ಷಿಸಬಹುದಾಗಿದೆ.
ಪ್ರಸ್ತಾಪಿತ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡು ಬರುವ ಸಸ್ಯ ಮತ್ತು ಪ್ರಾಣಿ ಸಂಕುಲ :ಪ್ರಸ್ತಾಪಿತ ಅರಣ್ಯ ಪ್ರದೇಶವು ಮುಳ್ಳುಗಂಟಿ ಜಾತಿಯ ಸಸ್ಯ ಸಂಕುಲವನ್ನು ಹೊಂದಿದ್ದು, ಅರಣ್ಯ ಪ್ರದೇಶದ ಒಳಗೆ ಹೋಗುವುದು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಮಣ್ಣಿನ ಸವಕಳಿಯಾಗಿದ್ದು, ಕಲ್ಲಿನಿಂದ ಕೂಡಿದ್ದು ಮೇಲ್ಪದರದಲ್ಲಿ ಮಾತ್ರ ಮಣ್ಣು ಆವೃತವಾಗಿದ್ದು, ಕೆಳಭಾಗದಲ್ಲಿ ಕಲ್ಲಿನಿಂದ ಕೂಡಿರುತ್ತದೆ. ಇಲ್ಲಿನ ಮಣ್ಣಿನಲ್ಲಿ ಕ್ಷಾರಿಯ ಅಂಶವನ್ನು ಹೊಂದಿದ್ದು, ಕಲ್ಲಿನಿಂದ ಕೂಡಿರುತ್ತದಲ್ಲದೆ ತುಂಬಾ ಇಳಿಜಾರಿನ ಜಾಗದಲ್ಲಿ ಕಲ್ಲಿನಿಂದ ಕೂಡಿದ ಸಣ್ಣ ಸಣ್ಣ ಬಿರುಕಿರುವ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಈ ಪ್ರದೇಶದಲ್ಲಿ ದಿಂಡಲ ಮಶವಾಳ, ಇಪ್ಪೆ, ಸಾಂಬ್ರಾಣಿ ಮರ, ಸೋಮಿ ಇತರೆ ಜಾತಿಯ ಮರಗಳು ಕಂಡುಬರುತ್ತಿವೆ. ಒಟ್ಟಾರೆಯಾಗಿ ಈ ಪ್ರದೇಶವು ಪೊದೆಗಳಿಂದ ಕೂಡಿದ ಎಲೆ ಉದುರುವ ಕಾಡಿನಿಂದ ಕೂಡಿದೆ.
ಮಾರ್ಚ-2011 ರಲ್ಲಿ ಅರಣ್ಯ ಮಹಾವಿದ್ಯಾಲಯ ಶಿರಸಿಯ ಶ್ರೀ ಶ್ರೀಕಾಂತ ಗುನಗಾ ರವರು ಈ ಸ್ಥಳದಲ್ಲಿ ಇರುವ ಸಸ್ಯ ಸಂಕುಲದ ಅಧ್ಯಯನವನ್ನು ಕೈಗೊಂಡು 43 ವಿವಿಧ ಕುಟುಂಬಗಳಿಗೆ ಸೇರಿದ 115 ವಿವಿಧ ಪ್ರಭೇದಗಳು ಮತ್ತು 143 ಜಾತಿಯ ಗಿಡಗಳನ್ನು ಗುರುತಿಸಿದರು. ಅವುಗಳಲ್ಲಿ ಸಣ್ಣ ಗಿಡಗಳು ಹೆಚ್ಚಾಗಿದ್ದು 43 ಜಾತಿಯ ಗಿಡಗಳು (30.1%) 42 ಪೊದೆ ಜಾತಿಯ ಗಿಡಗಳು (29.4%) ಮತ್ತು 29 ಜಾತಿಯ ಮರಗಳು (20.2%) ಇರುವುದು ಕಂಡುಬಂತು. ಅವುಗಳಲ್ಲಿ 6 ಜಾತಿಯ ಅಪÀರೂಪದ ನಾಶದ ಅಂಚಿನಲ್ಲಿರುವ ಗಿಡಗಳು ಸಹ ಇರುವುದನ್ನು ಗುರುತಿಸಿದರು. ಸುಮಾರು 72 ಜಾತಿಯ ಗಿಡಗಳು (50.3%) ಲಾಭದಾಯಕ ಗಿಡಗಳಿದ್ದು, 31 ಔಷಧ ಗಿಡಗಳು ಮತ್ತು 17 ಹಣ್ಣು ಕೊಡುವ ಗಿಡಗಳಿರುವುದನ್ನು ಸಹ ಗುರುತಿಸಲಾಯಿತು.ಒಂದು ಪ್ರದೇಶದಲ್ಲಿ ವಾಸಿಸುವ ಪ್ರಾಣಿ ವೈವಿಧ್ಯತೆಯು ಅಲ್ಲಿ ಲಭ್ಯವಿರುವ ಸಸ್ಯ ಸಂಕುಲವನ್ನು ಅವಲಂಭಿಸಿರುತ್ತದೆ. ಸಸ್ಯ ಸಂಕುಲದ ಬಗ್ಗೆ ತಿಳಿಯುವುದರಿಂದ ಅಲ್ಲಿರುವ ಪ್ರಾಣಿ ಸಂಕುಲ ಮತ್ತು ಅವುಗಳ ನಿರ್ವಹಣೆಗೆ ಅನುಕೂಲಕರವಾಗಿದೆ. ಪ್ರಸ್ತುತ ಅಧ್ಯಯನದ ಪ್ರದೇಶವು ಒಣ ಮುಳ್ಳು ಗಿಡಗಂಟಿಗಳಿಂದ ಕೂಡಿದ್ದು, ಉತ್ತಮವಾದ ಸಸ್ಯ ವೈವಿಧ್ಯತೆಯನ್ನು ಹೊಂದಿರುವ ಪ್ರದೇಶವಾಗಿದ್ದು ಹೆಚ್ಚಿನ ಪ್ರಾಣಿ ಸಂಕುಲಕ್ಕೆ ಉತ್ತಮ ವಾತಾವರಣ ಮತ್ತು ವಾಸಸ್ಥಳವನ್ನು ಒದಗಿಸಬಲ್ಲದು. ಉತ್ತಮವಾದ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಪ್ರದೇಶದಲ್ಲಿಯ ಜೀವ ವೈವಿಧ್ಯತೆಯನ್ನು ಶಾಶ್ವತವಾಗಿ ಸಂರಕ್ಷಿಸಬಹುದಾಗಿದೆ.ಪಕ್ಷಿ ಸಂಕುಲಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪ್ರದೇಶದಲ್ಲಿ ಉತ್ತಮವಾದ ಸ್ಥಳೀಯ ಪಕ್ಷಿಗಳ ಸಂಕುಲವು ಲಭ್ಯವಿದೆ. ನವಿಲುಗಳು ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬೆಳಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ನವಿಲುಗಳ ಹಿಂಡಗಳು ಕಂಡುಬರುವುದು ಇಲ್ಲಿ ಸಾಮಾನ್ಯವಾಗಿದೆ. ನೆಲದ ಮೇಲೆ ವಾಸಿಸುವ ಜಾತಿಯ ಹೆಚ್ಚಿನ ಪಕ್ಷಿಗಳು ಸಹ ಇಲ್ಲಿ ಕಂಡುಬರುತ್ತವೆ. ನೆಲದ ಮೇಲೆ ವಾಸಿಸುವ ಪಕ್ಷಿಗಳು ದನ ಕರುಗಳು ಕುರಿಗಳ ತುಳಿತಕ್ಕೆ ಒಳಗಾಗುವುದು ಸಾಮಾನ್ಯ. ಆದುದರಿಂದ ಈ ಪ್ರದೇಶವನ್ನು ರಕ್ಷಣೆ ಮಾಡುವುದರಿಂದ ನಮ್ಮ ರಾಷ್ಟ್ರೀಯ ಪಕ್ಷಿಯ ಜೊತೆಗೆ ಈ ನೆಲದ ಮೇಲೆ ವಾಸಿಸುವ ಪಕ್ಷಿಗಳನ್ನು ಸಹ ಸಂರಕ್ಷಿಸಬಹುದಾಗಿದೆ.ಪ್ರಾಣಿ ಸಂಕುಲಕ್ಕೆ ಸಂಬಂಧಿಸಿದಂತೆ, ಸಣ್ಣ ಜಾತಿಯ ಪ್ರಾಣಿಗಳು ಹೆಚ್ಚಾಗಿ ಕಂಡುಬರುತ್ತದೆ. ಕಾಡುಹಂದಿಯ ಸಂತತಿಯು ಹೆಚ್ಚಾಗಿರುವುದಲ್ಲದೆ, ನರಿ, ತೋಳ, ಕತ್ತೆಕಿರುಬ ಪ್ರಾಣಿಗಳು ಸಹ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಮುಂಗೂಸಿಗಳು ಹೆಚ್ಚಿದ್ದು ನಿರಂತರವಾಗಿ ಕಾಣಸಿಗುತ್ತವೆ. ಚಿಂಕಾರಾವು ಹೆಚ್ಚಾಗಿ ಕಾಡಿನೊಳಗೆ ದನ ಕುರಿಗಳನ್ನು ಮೇಯಿಸಲು ಹೋಗುವವರಿಗೆ ಮತ್ತು ಅರಣ್ಯದ ಅಂಚಿನಲ್ಲಿ ಜಮೀನು ಸಾಗುವಳಿ ಮಾಡುವ ರೈತರಿಗೆ ಕಂಡುಬರುತ್ತವೆ.
ಕಳ್ಳಭೇಟೆ ರಕ್ಷಣಾ ಶಿಬಿರಗಳ ಸ್ಥಾಪನೆಕ್ಷೇತ್ರ ಸಿಬ್ಬಂದಿಗಳಿಗೆ ವಾಹನ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವುದರ ಮೂಲಕ ಗಸ್ತು ತಿರುಗುವುದರಿಂದ ಮತ್ತು ಭೇಟೆಗಾರರ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಂಡರೆ ಅರಣ್ಯದಲ್ಲಿ ಉರುಳು ಹಾಕುವುದು, ಬಲೆ ಹಾಕುವುದು ಮತ್ತು ಕಳ್ಳಭೇಟಿಯನ್ನು ನಿಯಂತ್ರಿಸಬಹುದು.ಜ. ಭೇಟೆ ಮಾಡುವವರ ಬಗ್ಗೆ ಮಾಹಿತಿ ನೀಡಿದವರಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುವುದು.
ಇದರೊಂದಿಗೆ ಈ ಕೆಳಕಂಡ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಚಿಂಕಾರಾವನ್ನು ಸಂರಕ್ಷಿಸಬಹುದಾಗಿದೆ.
1. ಬೇಲಿ, ದನನಿರೋಧಕ ಕಂದಕ ಮತ್ತು ಕಲ್ಲಿನ ಗೊಡೆಗಳನ್ನು ನಿರ್ಮಿಸುವುದರ ಮೂಲಕ ಅರಣ್ಯದ ಗಡಿಯನ್ನು ಗುರುತಿಸುವುದು.2. ಪ್ರಸ್ತಾಪಿತ ಪ್ರದೇಶದಲ್ಲಿರುವ ಖಾಸಗಿ ಜಮೀನುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವುದು ಮತ್ತು ಅರಣ್ಯದಂಚಿನ ಹಳ್ಳಿಗಳಿಗೆ ಕಾಲುದಾರಿಯನ್ನು ಒದಗಿಸುವುದು.
2. ಪ್ರಸ್ತಾಪಿತ ಪ್ರದೇಶದಲ್ಲಿರುವ ಖಾಸಗಿ ಜಮೀನುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವುದು ಮತ್ತು ಅರಣ್ಯದಂಚಿನ ಹಳ್ಳಿಗಳಿಗೆ ಕಾಲುದಾರಿಯನ್ನು ಒದಗಿಸುವುದು
3. ಚಿಂಕಾರಾಕ್ಕೆ ಬೇಕಾಗುವ ಜಾತಿಯ ಸಸಿಗಳನ್ನು ನಾಟಿ ಮಾಡುವುದು.
4. ಬಫರ್ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದು.
5. ತೋಳಗಳು ಈ ಪ್ರದೇಶದಲ್ಲಿ ಕಂಡುಬರುವುದರಿಂದ ಅವುಗಳ ಮಲವನ್ನು ಸಂಗ್ರಹಿಸಿ ಅದರ ಅಧ್ಯಯನ ಕೈಗೊಳ್ಳುವುದು.
6. ಚಿಂಕಾರಾದಿಂದ ಮಾನವ ಪ್ರಾಣಿ ಸಂಘರ್ಷವು ಈ ಪ್ರದೇಶದಲ್ಲಿ ತುಂಬಾ ವಿರಳವಾಗಿದ್ದು 2013 ರಲ್ಲಿ ಮೊಸಳೆಯು ಸಾಕುಪ್ರಾಣಿ ಮತ್ತು ಮನುಷ್ಯರ ಮೇಲೆ ದಾಳಿ ಮಾಡಿದ್ದು, ಇಂತಹ ಪ್ರಕರಣಗಳಲ್ಲಿ ವೇಗವಾಗಿ ಪರಿಹಾರವನ್ನು ಒದಗಿಸುವುದರ ಮೂಲಕ ಅಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗಿದೆ.
7. ಇಲಾಖಾ ಸಿಬ್ಬಂದಿಗಳು, ಗ್ರಾಮ ಅರಣ್ಯ ಸಮಿತಿಯ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಮತ್ತು ಇತರೆ ಹಳ್ಳಿಯ ಜನರಿಗೆ ವನ್ಯಜೀವಿಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ತರಬೇತಿಗಳನ್ನು ನಡೆಸುವುದು.
8. ಪ್ರಸ್ತುತ 12000 ಹೆ. ಅರಣ್ಯ ಪ್ರದೇಶ ರಕ್ಷಣೆಗೆ ಕೇವಲ 3 ಉಪ ವಲಯ ಅರಣ್ಯ ಅಧಿಕಾರಿ ಮತ್ತು 6 ಅರಣ್ಯ ರಕ್ಷಕರಿದ್ದು, ಹೆಚ್ಚಿನದಾಗಿ 2 ಉಪ ವಲಯ ಅರಣ್ಯ ಅಧಿಕಾರಿ ಮತ್ತು 4 ಅರಣ್ಯ ರಕ್ಷಕರನ್ನು ಒದಗಿಸುವುದರ ಮೂಲಕ ಇಲ್ಲಿರುವ ಅರಣ್ಯ ಸಂಪತ್ತನ್ನು ರಕ್ಷಿಸಬಹುದಾಗಿದ್ದು, ಇವರುಗಳಿಗೆ ವಿಶೇಷ ಹುಲಿ ರಕ್ಷಣಾ ಪಡೆಯ ರೀತಿಯಲ್ಲಿ ತರಬೇತಿಯನ್ನು ನೀಡುವುದು ಮತ್ತು ಅವರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವುದು.
ಅತೀ ಮುಖ್ಯವಾದುದೇನೆಂದರೆ ಇಲ್ಲಿಯ ನೈಸರ್ಗಿಕ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತನ್ನು ನಾಶದಿಂದ ತಡೆಯಲು ಕಠಿಣವಾದ ವಿಚಕ್ಷಣೆಯಿಂದ ಮಾತ್ರ ಸಾಧ್ಯ. ಇಷ್ಟೊಂದು ಪ್ರತಿಕೂಲ ವಾತಾವರಣವಿದ್ದರೂ ಸಹ ಮುಳ್ಳು ಗಿಡಗಂಟಿಯ ಕಾಡು ಮತ್ತು ಅಲ್ಲಿಯ ಸ್ಥಳೀಯ ವನ್ಯ ಮತ್ತು ವನ್ಯಪ್ರಾಣಿಗಳು ಕೊನೆಯ ಕೊಂಡಿಯಂತೆ ಬದುಕುಳಿದಿದೆ. (ತತ್‍ಕ್ಷಣದಲ್ಲಿ ನಾವು ಕಾರ್ಯಪ್ರವೃತರಾಗದಿದ್ದಲ್ಲಿ ಈ ನೈಸರ್ಗಿಕ ಸಂಪತ್ತು ವಿನಾಶವನ್ನು ತಲುಪಿ ಪುನರುಜ್ಜೀವನಗೊಳಿಸಲು ಸಾಧ್ಯವಾಗುವ ಹಂತವನ್ನು ತಲುಪುವ ಅಪಾಯದಲ್ಲಿದೆ.) ಆದ್ದರಿಂದ ಎಲ್ಲರು ಶ್ರಮವಹಿಸಿ ಈ ನೈಸರ್ಗಿಕ ಸಂಪತ್ತನ್ನು ರಕ್ಷಿಸಿ ಹಿಂದಿನ ಗತವೈಭವನ್ನು ಮರುಕಳಿಸುವಂತೆ ಮಾಡುವಲ್ಲಿ ಶ್ರಮಿಸೋಣ.