ಮಾಲಾಪೂರದಲ್ಲಿ ಗೊಬ್ಬರ ಕಾರ್ಖಾನೆಗೆ ವಿರೋಧ



ಮುಧೋಳ: ತಾಲೂಕಿನ ಮಾಲಾಪುರ ಕ್ರಾಸ್ ಬಳಿ ಗೊಬ್ಬರ ಕಾರ್ಖಾನೆ ಮಾಡಲು ತಮ್ಮ ಗ್ರಾಮಸ್ಥರ ವಿರೋಧವಿದೆ ಎಂದು ಗ್ರಾಮದ ಕೆಲವು ಯುವಕರು, ಮಹಿಳೆಯರು ತಹಸೀಲ್ದಾರ್ ಕಚೇರಿಗೆ ತೆರಳಿ ತಾಪಂ ಇಒ ಕಿರಣ ಘೋರ್ಪಡೆ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಗೊಳ್ಳಿ ರಾಯಣ್ಣ ಸರ್ಕಲ್‌ದಿಂದ ತಹಸೀಲ್ದಾ‌ ಕಚೇರಿವರಿಗೂ ಪ್ರತಿಭಟನೆ ನಡೆಸಿದರು. ರನ್ನ ಸರ್ಕಲ್ ದಲ್ಲಿ ಮಾನವಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಪ್ರಮುಖ ಸಂತೋಷ ಕದಂ ಹಾಗೂ ಹೋರಾಟಗಾರ ಯಲ್ಲಪ್ಪ ಹೆಗಡೆ ಮಾತನಾಡಿ, ಗೊಬ್ಬರ ಕಾರ್ಖಾನೆ ಮಾಡುವುದರಿಂದ ನಮ್ಮೆಲ್ಲರ

ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುತ್ತದೆ. ಅಧಿಕಾರಿಗಳ ನಿಷ್ಕಾಳಜಿತಯಿಂದ ಜನರಿಗೆ ತೊಂದರೆಯಾಗಿದೆ. ಸರಕಾರ ಈ ಕುರಿತು ಗಂಭಿರವಾಗಿ ಪರಿಗಣಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಭೀಮಪ್ಪಕಿತ್ತೂರ, ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸುಭಾಸ ಶಿರಬೂರ, ಗೋವಿಂದಪ್ಪ ಮೆಟಗುಡ್ಡ, ಸದಾಶಿವ ಹೊಸಮನಿ, ಹಣಮಂತ ಶಿಂಧೆ, ಗಿರೀಶ ಪಾಟೀಲ, ಈಶ್ವರ ಯಂಕಂಚಿ ಇತರರು ಮನವಿಯಲ್ಲಿ ಸಹಿ ಮಾಡಿದ್ದಾರೆ. ಮಹಿಳೆಯರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನವೀನ ಹಳೆಯದು