ಬಾಗಲಕೋಟೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯದಿಂದ ಡಿಸೆಂಬರ 15 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ವರೆಗೆ ನವನಗರದ ಡಾ.ಬಾಬು ಜಗಜೀವನ್ ಭವನದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಿ, ತಮ್ಮಲ್ಲಿ ಖಾಲಿ ಇರುವ පඨි ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮಾ, ಪದವೀಧರರು ಹಾಗೂ ವೃತ್ತಿಪರ ಪದವೀಧರರಿಗೆ ಅವಕಾಶವಿರುತ್ತದೆ. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆನ್‌ಲೈನ್ http://skillconnect.kaushalkar.com/ candidatereg ಮೂಲಕನೊಂದಣಿ ಮಾಡಿಕೊಳ್ಳಬೇಕು. ಹಾಗೂ ಡಿಸೆಂಬರ 15 ರಂದು ಝರಾಕ್ಸ ಅಂಕಪಟ್ಟಿ, ಆಧಾರ ಕಾರ್ಡ, ಬಯೋಡಾಟಾಗಳನ್ನು ಕನಿಷ್ಟ 5 ಪ್ರತಿಗಳೊಂದಿಗೆ ಮೇಳದಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂಸಂ.08354-295210, 9538162203, 9886105067, 76766341847 ಸಂಪರ್ಕಿಸಬಹುದಾಗಿದೆ. ಮೇಳದಲ್ಲಿ ಭಾಗವಹಿಸುವ ಉದ್ಯಮಿಗಳು http://skillconnect.kaushalkar. com/employereg ನಲ್ಲಿ ನೊಂದಣಿಮಾಡಿಕೊಳ್ಳುವಂತೆ ಜಿಲ್ಲಾ ಕೌಶಲ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ