ಡಿಸೆಂಬರ್ 20 ರಿಂದ ಹಲಗಲಿ ವೀರಭದ್ರೇಶ್ವರ ಜಾತ್ರೆ ಪ್ರಾರಂಭ.



ಮುಧೋಳ: ಹಲಗಲಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಡಿ.20 ರಿಂದ 22 ರವರೆಗೆ ನಡೆಯಲಿದೆ.

ಡಿ. 20 ರಂದು ಮತ್ತು ಪುರವಂತರ ಮೆರವಣಿಗೆಯೊಂದಿಗೆ ವೀರಭದ್ರೇಶ್ವರ ಅಗ್ನಿ ಪ್ರವೇಶ ನಡೆಯುವುದು.

21 ರಂದು ಮುಂಜಾನೆ 4 ಗಂಟೆಗೆ ಮಾಚಕನೂರ ಶ್ರೀ ಹೊಳೆಬಸವೇಶ್ವರ ನಂದಿಕೋಲು ಬರಮಾಡಿಕೊಳ್ಳುವುದು ಮುಂಜಾನೆ 11 ಗಂಟೆಗೆ ಶ್ರೀ ವೀರಭದ್ರೇಶ್ವರ ಪೂಜಾ ಸಮಾರಂಭದೊಂದಿಗೆ ಕಾರ್ತಿಕ ಸಮಾರಂಭ ಮುಕ್ತಾಯ.

ಗುರುವಾರ 22 ರಂದು ಮುಂಜಾನೆ 10 ಗಂಟೆಗೆ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಮೆರವಣಿಗೆ ಜರುಗುವುದು.

ಹಾಗೂ ಜಾತ್ರೆಯ ಮೂರು ದಿನವೂ ಭಕ್ತಾದಿಗಳಿಗೆ ಅನ್ನ ಪ್ರಸಾದ ಲಭ್ಯವಿರುತ್ತದೆ.

ಕ್ರೀಡೆಗಳ ಮಾಹಿತಿ

ರವಿವಾರ ಡಿ 18

ಸೂಪರ್ ಸಿಕ್ಸ್ ಕ್ರಿಕೆಟ ಟೂರ್ನಾಮೆಂಟ್ ಪಂದ್ಯಾವಳಿಗಳು.ಸಾಯಂಕಾಲ 4 ಗಂಟೆಗೆ ಮಹಿಳಾ ಹಾಗೂ ಪುರುಷರ ಪೋ ಶಬಡ್ಡಿ ಪಂದ್ಯಾವಳಿಗಳು.

ಬುಧವಾರ ಡಿ 21

ಮಧ್ಯಾಹ್ನ 12-00 ಜೋಡು ಎತ್ತಿನ ತೆರಬಂಡಿ ಸ್ಪರ್ಧೆ

ಗುರುವಾರ ಡಿ 22

ಸಾಯಂಕಾಲ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು.

ನಾಟಕ ಪ್ರದರ್ಶನ

ಡಿ 20 ರಂದು - ಗೌಡ ಮೆಚ್ಚಿದ ಹುಡುಗಿ

ಡಿ 21 ರಂದು - ಕಚ್ಚೆದೆಯ ವೀರರಿಗೆ ಕೊಚ್ಚಿ ಹೋದ ದಣಿಕರು

ಡಿ 20 ರಂದು - ದೈವ ದಾರಿ ಬಿಡಿಸಿತು



ನವೀನ ಹಳೆಯದು