87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಧೋಳದಲ್ಲಿ ನಡೆಸುವಂತೆ ಕಾರಜೋಳ ಮನವಿ


Govind Karjol Namma Mudhol

ಮುಧೋಳ: ಅತ್ಯಂತ ತ್ವರಿತವಾಗಿ ಅಭಿವೃಧ್ಧಿಹೊಂದಿದ ಮುಧೋಳ ಪಟ್ಟಣದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲಾ ಉನುಕೂಲತೆಗಳಿವೆ. ಈ ದಿಕ್ಕಿನಲ್ಲಿ ಜಿಲ್ಲಾ ಕಸಾಪ, ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರಲ್ಲಿ ವಿನಂತಿಸಿ ಪಟ್ಟಬಿಡದೆ ಕೆಲಸ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಅವರು ಮುಧೋಳ ನಗರದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜೀವನ್ ರಾಂ ಭವನ ಸಂಕೀರ್ಣದಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

1995ರಲ್ಲಿ ಮುಧೋಳದಲ್ಲಿ ನಡೆದ 64ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬೇಕಾದಷ್ಟು ಮೂಲಸೌಕರ್ಯ ಇಲ್ಲದಿದ್ದರೂ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ಆದರೆ ಈಗ ಮುಧೋಳ ದೊಡ್ಡ ಪಟ್ಟಣವಾಗಿ ಬೆಳೆದಿದೆ. ಈ ದಿಕ್ಕಿನಲ್ಲಿ ಜಿಲ್ಲಾ ಕಸಾಪ, ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರಲ್ಲಿ ವಿನಂತಿಸಿ ಪಟ್ಟಬಿಡದೆ ಕೆಲಸ ಮಾಡಬೇಕು.

ಕನ್ನಡದ ಬಗ್ಗೆ ಕೀಳರಿಮೆ ಬೇಡ, ಕಾನೂನು ಮೂಲಕ ಎಲ್ಲವೂ ಸಾಧ್ಯವಿಲ್ಲ. ಜನರು ಕನ್ನಡದ ಬಗ್ಗೆ ಒಲವು ತೋರಿಸಬೇಕು 10ನೇ ಶತಮಾನದ ಸಾಹಿತಿಗಳ ಹಾಗೂ 12ನೇ ಶತಮಾನದ ಶರಣರಿಂದ ಕನ್ನಡ ಗಟ್ಟಿಯಾಗಿ ಉಳಿದಿದೆ ಎಂದು ಅವರು ಹೇಳಿದರು.

ನವೀನ ಹಳೆಯದು