ಮುಧೋಳ: ನೆನೆಗುದಿಗೆ ಬಿದ್ದಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗದ ತರಿತ ಕಾಮಗಾರಿಗೆ ಆಗ್ರಹಿಸಿ ಹಾಗು ಸದರಿ ಮಾರ್ಗಕ್ಕಾಗಿ ಭೂಮಿ ಕೊಟ್ಟವರ ಮನೆಯಲ್ಲೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ನೇತೃತ್ವದಲ್ಲಿ ಶನಿವಾರದಂದು ಬಾಗಲಕೋಟೆಯಿಂದ ಆರಂಭವಿಸಿರುವ ಅರೆಬೆತ್ತಲೆ ಪಾದಯಾತ್ರೆ ರವಿವಾರದಂದು ಗ್ರಾಮವನ್ನು ತಲುಪಿತು.
ಕುಡಚಿ-ಬಾಗಲಕೋಟೆ ರೈಲು ಮಾರ್ಗದ ತ್ವರಿತ ಕಾಮಗಾರಿಗೆ ಆಗ್ರಹಿಸಿ ರವಿವಾರದಂದು ರೈಲ್ವೇ ಹೋರಾಟ ಸಮಿತಿ ಅಧ್ಯಕ್ಷೆ ಕುತುಬುದ್ದೀನ ಖಾಜಿ ನೇತೃತ್ವದ ಹೋರಾಟಗಾರರು ಬಿಜ್ಜಡೋಣಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. |
ಮಧ್ಯಾಹ್ನ ಗ್ರಾಮದ ಮುಖಾಂತರ ಸಮೀಪದ ಖಜ್ಜಿಡೋಣಿ ರೈಲು ನಿಲ್ದಾಣವನ್ನು ತಲುಪಿದ ಪ್ರತಿಭಟನಾ ಕಾರರು ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಖಜ್ಜೆಡೋಣಿಯಿಂದ ಮುಂದಿನ ರೈಲು ಮಾರ್ಗದ ನಿರ್ಮಾಣವಾಗದ ಹೊರತು ಖಜ್ಜಿಡೋಣಿ ರೈಲು ನಿಲ್ದಾಣದಲ್ಲಿ ಸರಕುಸಾಗಣೆಯನ್ನು ಸ್ಥಗಿತಗೊಳಿಸಬೇಕೆಂದು ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಸ್ಥಳದಲ್ಲಿ ಆಗ್ರಹಿಸಿದರು. ರಾಜ್ಯ ರೈತ ಸಂಘದ ಮುಖಂಡ ಬಸಪ್ಪ ಶಿರಬೂರ,ಹಸಿರು ಸೇನೆಯ ಮಂಜುಳಾ ಭೂಸಾರಿ, ವನಜಾಕ್ಷಿ ಮಂದೂರ,ಗುಲಾಬಸಾಬ ಆತ್ತಾರೆ.ಹುಸೇನಸಾಬ ಮೆಹತರ,ದುರುಗಪ್ಪ ಕಟ್ಟಟಿಮನಿ,ಅನೀಲ ರಾಠೋಡ ಮುಂತಾದವರು ಪ್ರತಿಭಟನೆಯಲ್ಲಿದ್ದರು.