ಮುಧೋಳ : ಸಮೀಪದ ಶಿರೋಳ ಗ್ರಾಮದಲ್ಲಿ ಐತಿಹಾಸಿಕ ಸಪ್ತಮಾತೃಕೆಯರ ಶಿಲ್ಪ ಶೋಧವಾಗಿದೆ ಎಂದು ಇತಿಹಾಸ ತಜ್ಞ ಡಾ.ಸಂಗಮೇಶ ಕಲ್ಯಾಣಿ ತಿಳಿಸಿದ್ದಾರೆ.
ಗ್ರಾಮದ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಹಲವಾರು ಶತಮಾನಗಳ ಪುರಾತನ ಇತಿಹಾಸವಿರುವ ಶಿಲ್ಪವು ದೊರೆತಿದ್ದು, ೧೦ ಶತಮಾನಕ್ಕೂ ಮುಂಚಿನ ಇತಿಹಾಸ ಹೊಂದಿರುವ ಈ ಶಿಲ್ಪವು ವೈಷ್ಣವ ಸಂಪ್ರದಾಯವನ್ನು ಸಾಕ್ಷೀಕರಿಸುತ್ತದೆ ಎಂದು ಇತಿಹಾಸಕಾರ ಕಲ್ಯಾಣಿ ಮಾಹಿತಿ ನೀಡಿದ್ದಾರೆ.
ಶಿಲ್ಪದಲ್ಲಿ ೩ ಶಿವಲಿಂಗಗಳಿದ್ದು, ಶೈವ ಸಂಪ್ರದಾಯ ಆಚರಣೆ ನಡೆದಿರುವುದು ೧೨ ನೇ ಶತಮಾನದ ಕಲಚೂರಿಗಳ ಶಾಸನವು ಈ ಶಾಸನಕ್ಕೆ ಪೂರಕವಾಗಿದೆ ಎಂದು ಮಾಹಿತಿ ನೀಡಿದರು.
ಸಪ್ತ ಮಾಲಿಕೆಯಲ್ಲಿ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ಕಾರ್ತಿಕೇಯ ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಾ ಇವರೊಂದಿಗೆ ಬ್ರಹ್ಮ, ವಿಷ್ಣು, ಶಿವ, ಸ್ಕಂದ, ವರಾಹ ಹಾಗೂ ಚಾಮುಂಡಿಯ ತವರನ್ನು ಶಿಲ್ಪದಲ್ಲಿ ಕಾಣಬಹುದು ಎಂದು ತಿಳಿಸಿದರು.
ಗ್ರಾಮಸ್ಥರಾದ ಕಾಡಪ್ಪ ಕಣಗಲ್ಲ, ಪರಶುರಾಮ ಮಾಳಿ, ಬಸವರಾಜ ಬಡಿಗೇರ, ಸುಭಾಷ ನಬಾಬ, ಉಮಾ ಕಾತರಕಿ ಹಾಗೂ ಶಿವಾಪುರ ಮುಖ್ಯಗುರುಗಳು ಇದ್ದರು.