ಮುಧೋಳ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಡಿಸೆಂಬರ 17 ರಂದು ಬೆಳಿಗ್ಗೆ 11 ಗಂಟೆಯಿಂದ ಆಯಾ ತಾಲೂಕಿನ ಆಯ್ದ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟೆ ತಾಲೂಕಿನ ದೇವಲಾಪೂರ, ಸಿದ್ನಾಳ ಪು.ಕೇಂದ್ರ, ಇಲಕಲ್ಲ ತಾಲೂಕಿನ ಗೊರಬಾಳ, ನಂದವಾಡಗಿ, ಕಂದಗಲ್ಲ, ಗುಳೇದಗುಡ್ಡ ತಾಲೂಕಿನ ಹೂಲಸಗೇರಿ, ಬಾದಾಮಿ ತಾಲೂಕಿನ ಆಲೂರ ಎಸ್.ಪಿ, ಹುನಗುಂದ ತಾಲೂಕಿನ ಸಂಗಮ ಆರ್.ಸಿ, ಹಡಗಲಿ, ಖಜಗಲ, ಮುಧೋಳ ತಾಲೂಕಿನ ಬಿದರಿ, ಅಂತಾಪೂರ, ಚಿಕ್ಕೂರ, ಬೀಳಗಿ ತಾಲೂಕಿನ ಬೂದಿಹಾಳ, ತುಂಬರಮಟ್ಟಿ, ಚಿನಿವಾಲ ಕೊಪ್ಪ ಜಮಖಂಡಿ ತಾಲೂಕಿನ ಅಡಿಹುಡಿ, ಟಕ್ಕೋಡ, ಚಿನಗುಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಬಿಸನಾಳ, ಮರ್ಜಿ, ಅಸ್ಕಿ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸದರಿ ಗ್ರಾಮಗಳ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ವಿದ್ಯುತ್ ಗ್ರಾಹಕರು, ರೈತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಾಗಿ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಪಡಿಸಿಕೊಳ್ಳುವಂತೆ ಬಾಗಲಕೋಟೆ ಹೆಸ್ಕಾಂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.