ಮುಧೋಳ: ಕೋವಿಡ್ ಹಿನ್ನೆಲೆ ಹೊಸ ವರ್ಷಾಚರಣೆಗೆ ಮುಧೋಳ ಪೊಲೀಸ್ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಹಾಗೂ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ ಹಾಗೂ ಈ ಮಾರ್ಗಸೂಚಿ ಮುಧೋಳ ತಾಲೂಕಿನಾದ್ಯಂತ ಅನ್ವಯವಾಗಲಿದೆ.
- ಮಧ್ಯಪಾನ ಮಾಡಿ ವಾಹನ ಚಾಲನೆ ನಿರ್ಬಂಧ
- 31 ರಾತ್ರಿ ನಿಗದಿತ ಸಮಯದೊಳಗೆ ಆಚರಣೆ ನಿಲ್ಲಿಸುವುದು
- ಮಧ್ಯಪಾನ ಮಾಡಿ ದಾಂಧಲೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವುದು ನಿರ್ಬಂಧ
- ನಿಗದಿತ ಜನರು ಹಾಗೂ ಕೊವಿಡ್ ನಿಯಮಾವಳಿಗಳ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವರ್ಷಾಚರಣೆ ಮಾಡುವುದು.
ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪ್ರಕಟಣೆ ತಿಳಿಸಿದೆ.