ಮುಧೋಳ : ಘಟಪ್ರಭಾ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡಿರುವ ಮಾಚಕನೂರ ದೇವಸ್ಥಾನಕ್ಕೆ ಹೊಳೆಬಸವೇಶ್ವರ ದೇವಸ್ಥಾನವೆಂದೇ ಪ್ರಖ್ಯಾತವಾಗಿದೆ. ಈ ದೇವಸ್ಥಾನದ ಜಾತ್ರಾ ಮಹೋತ್ಸವ ಡಿ.11ರಿಂದ 15ರವರೆಗೆ ನಡೆಯಲಿದೆ.
ಡಿ. 11 ರಂದು ಬಾಳೆಕಂಬದ ಮಹಾಪೂಜೆ, 12ರಂದು ಕಾರ್ತಿಕೋತ್ಸವ ನಡೆಯಲಿದೆ. ನಂತರ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. 13ರಂದು ಶ್ರೀ ಹೊಳೆಬಸವೇಶ್ವರ ಮಹಾರಥೋತ್ಸವ, ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ. 14ರಂದು ಮಧ್ಯಾಹ್ನ 3ಕ್ಕೆ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. 15ರಂದು ನಂದಿಕೋಲುಗಳ ಪೂಜೆ ಹಾಗೂ ಮೆರವಣಿಗೆ ನಡೆಯಲಿದೆ.
ಉತ್ತರ ಕರ್ನಾಟಕದ ಕಾಶಿಯೆಂದು ಪ್ರಸಿದ್ಧಿ ಪಡೆದಿರುವ ಶ್ರೀಕ್ಷೇತ್ರ ಮಾಚಕನೂರ ಹೊಳೆಬಸವೇಶ್ವರ ದೇವಸ್ಥಾನ ಶಿಲ್ಪಕಲಾ ಆಗರವೇ ಆಗಿದೆ. ಪ್ರತಿ ಯುಗಾದಿ ಅಮವಾಸ್ಯೆಯಂದು ಸೂರ್ಯೋದಯದ ಕಿರಣಗಳು ಹೊಳೆಬಸವೇಶ್ವರ ಸ್ವಾಮಿಯನ್ನು ಸ್ಪರ್ಶಿಸುವುದು ಇಲ್ಲಿನ ವಿಶೇಷವಾಗಿದೆ. ಸಕಲರ ಇಷ್ಟಾರ್ಥ ಪೂರೈಸುವ ಐತಿಹಾಸಿಕ ಪರಂಪರೆಯ ಪ್ರತೀಕವಾಗಿದೆ. ಹೊಳೆಬಸವೇಶ್ವರ ದೇವಾಲಯವನ್ನು ಕಲ್ಯಾಣ ಚಾಲುಕ್ಯರು ಕ್ರಿ.ಶ.8ನೇಶತಮಾನದಲ್ಲಿ ನಿರ್ಮಿಸಿದ್ದಾರೆ. ಕಟ್ಟಡದ ಮತ್ತು ತಲ ವಿನ್ಯಾಸ, ಗೋಡೆ ರಚನೆ, ಅದರ ಮೇಲಿನ ಅಲಂಕಾರಗಳು, ಗೋಪುರಗಳು, ಶಿಖರಗಳ ರಚನೆ, ಅದರ ಮೇಲಿನ ಅಲಂಕಾರಗಳು, ಗೋಪುರಗಳು, ಶಿಖರಗಳ ರಚನೆ ಹಾಗೂ ಕಂಬಗಳ ನಿರ್ಮಾಣದಲ್ಲಿ ಕಂಡುಬರುವ ಕೌಶಲ್ಯ ದೇವಸ್ಥಾನದಲ್ಲಿಕಾಣಬಹುದು.ಬುತ್ತಿಪೂಜೆ, ಎಲೆಪೂಜೆಮತ್ತು ಮಹಾರುದ್ರಾಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳು ಜರುಗಲಿವೆ.