ಒಂದು ಎಕರೆ ಪ್ರದೇಶದಲ್ಲಿ 20 ಅಡಿ ದೇಶದ ಪುರಾತನ ಬೆಳೆಗಳಲ್ಲಿ ಎತ್ತರದಷ್ಟು ಕಬ್ಬು ಬೆಳೆದು 100 ಟನ್ ಒಂದಾದ ಕಬ್ಬಿನ ಬೆಳೆ ಸಕ್ಕರೆ, ಸಾಧನೆ ಮಾಡಿದ ಜಗದಾಳದ ರೈತ ಕಾಗದ ಮತ್ತು ಮದ್ಯ ಭೀಮತಿ ಕರಿಗೌಡರ, ತಯಾರಿಕೆಗೆ ಪ್ರಮುಖ ಕಚ್ಚಾ ವಸ್ತುವಾಗಿದೆ. ಈ ಭಾಗದ ಪ್ರಮುಖ ಬೆಳೆಯಾಗಿರುವ ಕಬ್ಬು ಎಲ್ಲೆಂದರಲ್ಲಿ ಸಿಗುತ್ತದೆ. ಆದರೆ ಪ್ರತಿಯೊಬ್ಬ ರೈತ ಭೂಮಿಯಲ್ಲಿ ಕೆಲಸ ಮಾಡಿದರೆ ಹೇಗೆಲ್ಲ ಇಳುವರಿ ಮಾಡಬಹುದೆಂದು ಭೀಮಶಿ ಕರಿಗೌಡರ ತೋರಿಸಿಕೊಟ್ಟಿದ್ದಾರೆ.
ರೈತ ಹೋರಾಟಗಾರರಾಗಿರುವ ಭೀಮಶಿ ದಿನಂಪ್ರತಿ ಹೊಲ- ಗದ್ದೆಯಲ್ಲಿಯೇ ಕೆಲಸ ಮಾಡುತ್ತ ಹೋರಾಟ ಸಮಯದಲ್ಲಿ ಮಾತ್ರ ರೈತರೊಂದಿಗೆ ಬೆರೆತು ಮತ್ತೇ ತಮ್ಮ ಕಾಯಕದಲ್ಲಿ ತೊಡಗುವ ವಾಡಿಕೆ.
ಸಮರ್ಪಕವಾದ ಗೊಬ್ಬರ ಬಳಸಿ, ಭೂಮಿಯ ಹದದೊಂದಿಗೆ ನೀರನ್ನು ಹಾಯಿಸಿದ್ದಲ್ಲಿ ಎಲ್ಲವೂ ಸಾಧ್ಯವೆಂದರು. ಒಟ್ಟು ಮೂರು ಬೆಲೆಗಳಲ್ಲಿ ಒಂದನೇ ಮತ್ತು ಮೂರನೇ ಬೆಳಗಿಂತ ಎರಡನೇಯ ಬಾರಿಯ ಬೆಳೆ ಉತ್ತಮ ಇಳುವರಿ ನೀಡುತ್ತದೆ. ಕೆಲವರು ಹತ್ತಾರು ಬಾರಿ ಕೊಳೆ ಕಬ್ಬು ಬೆಳೆದ ಉದಾಹರಣೆ ಇದ್ದರೂ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ನಾವು ಮೂರನೇ ಬೆಳೆಯನ್ನು ಕಟಾವು ಮಾಡಿದ ನಂತರ ಸಂಪೂರ್ಣ ತೆಗೆದು ಮತ್ತೆ ಹೊಸದಾಗಿ ನಾಟಿ ಮಾಡಬೇಕೆಂದರು.
ಈ ರೀತಿ ಮಾಡಿದರೆ, ಖರ್ಚು-ವೆಚ್ಚ ಸೇರಿ ಎಕರೆಗೆ ಕನಿಷ್ಠ 2 ಲಕ್ಷ ರೂ. ಗಳನ್ನು ಲಾಭ ಪಡೆಯಲು ಸಾಧ್ಯ. ಕಾರ್ಖಾನೆಗಳೂ ಸಹಿತ ಪೂರಕವಾಗಿ ಪ್ರೋತ್ಸಾಹ ನೀಡಿದ್ದಲ್ಲಿ ಕಬ್ಬು ಬೆಳೆಗೆ ಸಹಕಾರಿಯಾಗುವದು ಇಲ್ಲವಾದಲ್ಲಿ ರೈತರು ಅನ್ಯ ಬೆಳೆಯತ್ತ ವಾಲುವದು ಸಹಜವೆಂದರು.
''ಟನ್ ಕಬ್ಬಿಗೆ 3,500 ನೀಡಿದರೆ ರೈತರು ಇನ್ನೂ ಉತ್ಸಾಹದಿಂದ ಕಬ್ಬು ಬೆಳೆಯಲು ಮುಂದಾಗುತ್ತಾರೆ. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತದೆ.