ಶ್ರೀಶೈಲದಲ್ಲಿ ಇಂದು ನಡೆದ ಸಮಾರಂಭದಲ್ಲಿ ಶ್ರೀಶೈಲಂ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು, ಕಾಶಿಯ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕರಾದ ಸಿದ್ದು ಸವದಿ, ಎಸ್ ಪಾಟೀಲ್ ನಡಹಳ್ಳಿ, ಆಂಧ್ರ ಪ್ರದೇಶದ ಸಚಿವರಾದ ಭುಗ್ಗನ ರಾಜೇಂದ್ರನಾಥ, ತಿರುಮಲ ತಿರುಪತಿ ದೇವಸ್ಥಾನದ ಚೇರಮನ್‌ರಾದ ವಾಯ್.ವಿ. ಸುಬ್ಬಾರೆಡ್ಡಿ, ಶ್ರೀಶೈಲಂ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆಡಳಿತಾಧಿಕಾರಿಗಳಾದ ಎಸ್.ಲವಣ್ಣ, ಬವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮತ್ತಿತರರು ಇದ್ದರು.
ಭವ್ಯ ಛತ್ರದ ಚಿತ್ರಣ➢
- 2 ಎಕರೆ ವಿಸ್ತೀರ್ಣದ ಪ್ರದೇಶ6
- 5,000 ಸ್ಕ್ವೇರ್ ಫೂಟ್ ವಿಸ್ತೀರ್ಣದ ಕಟ್ಟಡ
- 100 ಸುಸಜ್ಜಿತ ಕೊಠಡಿಗಳು
- 6000 ಸ್ಕ್ವೇರ್ ಫೂಟ್ ವಿಸ್ತೀರ್ಣದ ಸಭಾ ಭವನ
- 4 ಅಂತಸ್ತಿನ ಕಟ್ಟಡ, ಲಿಫ್ಟ್ ಸೌಲಭ್ಯ ಸ್ನಾನ ಗೃಹ, ಶೌಚಾಲಯ, ಮತ್ತು ಇತರೆ ಸೌಲಭ್ಯಗಳನ್ನು ಈ ಕಟ್ಟಡ ಒಳಗೊಂಡಿದೆ.
ಇದರ ಮೂಲಕ ಬಾಗಲಕೋಟೆಯ ಹಿರಿಮೆ ಶ್ರೀಶೈಲದ ವರೆಗೆ ಪಸರಿಸಿದಂತಾಗಿದೆ. ಬಾಗಲಕೋಟೆ ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಜನರು ಇದರ ಸದುಪಯೋಗ ಪಡೆಯಬೇಕು.
ಈ ಛತ್ರದ ಗೂಗಲ್ ಲೋಕೆಷನ್ ಪಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :