ಶೀತಗಾಳಿ: ಬಾಗಲಕೋಟೆ ಸೇರಿದಂತೆ 3 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ


ಮುಧೋಳ: ಉತ್ತರ ಭಾರತದ ಶೀತಗಾಳಿ ದಕ್ಷಿಣಕ್ಕೂ ವಕ್ಕರಿಸುವ ಸಾಧ್ಯತೆ - ಮುಂದಿನ 24 ಗಂಟೆಗಳ ಕಾಲ 3 ಜಿಲ್ಲೆಗಳಿಗೆ ಶೀತ ಗಾಳಿಯ ಮುನ್ನೆಚ್ಚರಿಕೆ - ಸ್ವೆಟರ್‌ಗಳು ಕೈಗವಸ ಧರಿಸಲು ಇಲಾಖೆಯಿಂದ ಸೂಚನೆ.

ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ್​ನಲ್ಲಿ ತೀವ್ರವಾಗಿ ತಣ್ಣನೆಯ ಶೀತಗಾಳಿ ಬೀಸುವ ಸಂಭವವಿದ್ದು, ತಾಪಮಾನ 4.5 ಡಿಗ್ರೀ ಸೆಲ್ಸಿಯಸ್ ಇಂದ 6.5 ಡಿಗ್ರೀ ಸೆಲ್ಸಿಯಸ್​ಗೆ ಇಳಿಯುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಕಡಿಮೆ 6 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹೇಳಿದೆ.

ತೀವ್ರ ಶೀತ ಗಾಳಿ ಬೀಸುತ್ತಿರುವುದರಿಂದ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸಬೇಕು. ದಟ್ಟವಾದ ಮಂಜಿನ ಕಣಗಳು ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಮತ್ತು ಶ್ವಾಸಕೋಶದಲ್ಲಿ ನೆಲೆಗೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದ ಉಬ್ಬಸ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಹೆಚ್ಚುತ್ತದೆ. ಸಾಧ್ಯವಾದಷ್ಟು ಮಾಸ್ಕ್ ಧರಿಸಿ ಓಡಾಡಬೇಕು. 3 ರಿಂದ 4 ಉಡುಪುಗಳನ್ನು ಧರಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ನವೀನ ಹಳೆಯದು