ಅಪರೂಪದ ಹಸಿರು ಧೂಮಕೇತು ಸುಮಾರು 50,000 ವರ್ಷಗಳ ನಂತರ ಭೂಮಿಯ ಮೂಲಕ ಹಾದುಹೋಗುತ್ತದೆ

50,000 ವರ್ಷಗಳ ನಂತರ, ಅಪರೂಪದ ಪ್ರಕಾಶಮಾನವಾದ ಧೂಮಕೇತು ಭೂಮಿಗೆ ಮರಳುತ್ತಿದೆ. ಇದೇ ಬುಧವಾರ ಮತ್ತು ಗುರುವಾರ ಭೂಮಿಯನ್ನು ಸಮೀಪಿಸುತ್ತಿರುವಾಗ ಎಲ್ಲಾ ನಕ್ಷತ್ರಗಳು ಪ್ರಕಾಶಮಾನವಾದ ಧೂಮಕೇತುವಿನ ನೋಟವನ್ನು ನೋಡಬಹುದು. ನಿಯಾಂಡರ್ತಲ್‌ಗಳು ಇದನ್ನು ನೋಡಿದ ಕೊನೆಯ ಜಾತಿಯೆಂದು ಭಾವಿಸಲಾಗಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, E3 ಕಾಮೆಟ್ ನಮ್ಮ ಗ್ರಹದಿಂದ 2.5 ಬೆಳಕಿನ ನಿಮಿಷಗಳ ಅಥವಾ 27 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದು ಹೋಗಲಿದೆ.

ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಫೆ. 1 ಹಾಗೂ 2ರಂದು ಧೂಮಕೇತುವೊಂದು ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಇದನ್ನು ಬೈನಾಕ್ಯುಲರ್ ಅಥವಾ ಮತ್ಯಾವುದೇ ಖಗೋಳ ವೀಕ್ಷಣಾ ಪರಿಕರಗಳಿಲ್ಲದೇ ಬರಿಗಣ್ಣಿನಿಂದ ನೋಡಬಹುದು ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಚ್‌.ಎಸ್‌.ಟಿ. ಸ್ವಾಮಿ ಪ್ರಕಟಣೆ ನೀಡಿದ್ದಾರೆ. ಭೂಮಿಯಿಂದ​ 4 ಕೋಟಿ 20 ಲಕ್ಷ ಕೀ.ಮೀ ಸಮೀಪ ಬರುತ್ತಿರುವ ಈ ಗ್ರಹ ಹಸಿರು ಬಣ್ಣದಿಂದ ಕಂಗೊಳಿಸುತ್ತಿರುವುದರಿಂದ ಈ ಧೂಮಕೇತುವಿಗೆ ಹಸಿರು ಧೂಮಕೇತು ಎಂದು ಹೆಸರಿದೆ ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 1 ಹಾಗೂ 2 ರಂದು ಭೂಮಿಗೆ ಇನ್ನೂ ಅತ್ಯಂತ ಹತ್ತಿರಕ್ಕೆ ಬರಲಿದೆ. ಅಂದು ಬೆಳಗಿನ ಜಾವ ಸಪ್ತರ್ಷಿ ಮಂಡಲದ ಸಮೀಪ ಇದನ್ನು ಯಾವುದೇ ದೃಶ್ಯ ಉಪಕರಣಗಳ ಸಹಾಯವಿಲ್ಲದೆ ಬರಿಗಣ್ಣಿನಿಂದಲೇ ನೋಡಬಹುದಾಗಿದೆ.

ಮೋಡಗಳ ಹಾವಳಿ ಇಲ್ಲದ ಸ್ವಚ್ಛ ನೀಲಾಕಾಶದಲ್ಲಿಈ ಅದ್ಭುತ ದೃಶ್ಯವನ್ನು ಪ್ರತಿಯೊಬ್ಬರೂ ನೋಡಿ ಕಣ್ತುಂಬಿ ಕೊಳ್ಳಬಹುದಾಗಿದೆ. ಇದೊಂದು ವಿಭಿನ್ನ ರೀತಿಯ ಧೂಮಕೇತುವಾಗಿದ್ದು, ಸೌರವ್ಯೂಹದ ಆಚೆಗೆ ಇರುವ ಊತ್‌ರ್‍ ಕ್ಲೌಡ್‌ನಿಂದ ಹೊರಬಂದು ಇದೀಗ ಭೂಮಿಯ ಹತ್ತಿರ ಬರುತ್ತಿದೆ. ಆದ್ದರಿಂದ ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. ಈ ಧೂಮಕೇತು ನಮ್ಮಿಂದ 16 ಕೋಟಿ ಕೀ.ಮೀ ದೂರವಿದ್ದು, ಫೆಬ್ರವರಿ 1 ಮತ್ತು 2 ರಂದು ಕೇವಲ 4 ಕೋಟಿ 20 ಲಕ್ಷ ಕೀ.ಮೀ ಸಮೀಪಕ್ಕೆ ಬರಲಿದೆ.


ಬರಿಗಣ್ಣಿನಲ್ಲಿ ಬೆಳಗಿನ ಜಾವದಲ್ಲಿ ಎಲ್ಲರೂ ವೀಕ್ಷಿಸಬಹುದಾಗಿದೆ. ಈ ಧೂಮಕೇತು ಮತ್ತೊಮ್ಮೆ ಬರಲು 50 ಸಾವಿರ ವರ್ಷಗಳು ಬೇಕು. ಇದರಿಂದ ಭೂಮಿಯ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಪ್ರತಿಯೊಬ್ಬರೂ ಈ ಅಪರೂಪದ ಧೂಮಕೇತು ನೋಡಿ ಆನಂದಿಸಿ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್‌.ಎಸ್‌.ಟಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೀನ ಹಳೆಯದು