ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಕೆಳಗಿನಂತಿದೆ
ಹುದ್ದೆಗಳ ಹೆಸರು: ಪೌರಕಾರ್ಮಿಕ
ಹುದ್ದೆಗಳ ಸಂಖ್ಯೆ: 438
ವಿದ್ಯಾರ್ಹತೆ: ಯಾವುದೇ ಶೈಕ್ಷಣಿಕ ಅರ್ಹತೆ ಇರುವುದಿಲ್ಲ. ಆದರೆ ಕನ್ನಡ ಭಾಷೆಯನ್ನು ಮಾತನಾಡಲು ಬರಬೇಕು.
ವೇತನ ಶ್ರೇಣಿ: ಮಾಸಿಕ ₹17,000 ರಿಂದ ₹28,950 ಸಾವಿರ ಹಾಗೂ ವಿವಿಧ ಭತ್ಯೆಗಳು
ವಯಸ್ಸು: ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ 55 ವರ್ಷಗಳು ಮೀರಿರಬಾರದು ( 23-11-2022)
ಅನುಭವ: ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿರಬೇಕು.
ಆಯ್ಕೆ ವಿಧಾನ: ವಯಸ್ಸು ಹಾಗೂ ಅನುಭವದ ಜೇಷ್ಠತೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.
ಕೆಲಸದ ಸ್ಥಳ: ಬಾಗಲಕೋಟೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ವಿಧಾನ: ಜಿಲ್ಲಾಧಿಕಾರಿಗಳು, ಪೌರಕಾರ್ಮಿಕ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ, ಬಾಗಲಕೋಟೆ ಅಥವಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 13-02-2023
ಹೆಚ್ಚಿನ ಮಾಹಿತಿಗೆ ದೂರವಾಣಿ: 08354 –235776