ದೇಶದ 20 ಉದ್ದದ ಸೇತುವೆಗಳಲ್ಲಿ ಕೋರ್ತಿ ಕೊಲ್ಹಾರ ಸೇತುವೆ ಕೂಡ ಒಂದು


ಬಾಗಲಕೋಟೆ: ಇದು ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸೋ ಸೇತುವೆ. ಆದ್ರೆ ಸವಾರರ ಪಾಲಿಗೆ ಇದೊಂಥರ ಸೆಲ್ಫೀ ಸ್ಪಾಟ್. ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳೋದಕ್ಕಂತೂ ಇದು ಸೂಪರ್ ಪ್ಲೇಸ್. ಕಣ್ಣಾಯಿಸಿದಷ್ಟು ದೂರ ನದಿ ಜಲದ ಆಕರ್ಷಣೆ ಹೊಂದಿರೋ ಈ ಸೇತುವೆ ರಾಜ್ಯದ ಹೆಗ್ಗಳಿಕೆಯೂ ಹೌದು.

ಕೋರ್ತಿ ಕೊಲ್ಹಾರ ಸೇತುವೆಯ ಸುಂದರ ದೃಶ್ಯಗಳು




ಈ ಸೇತುವೆಯು ಬಾಗಲಕೋಟೆ ಜಿಲ್ಲೆಯ ಕೊರ್ತಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣಕ್ಕೆ ನೇರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 218, ಆಲಮಟ್ಟಿಯ ಕೃಷ್ಣಾ ನದಿ ಅಣೆಕಟ್ಟೆಯ ಹಿನ್ನೀರಿಗೆ ಈ ಸೇತುವೆ ನಿರ್ಮಿಸಲಾಗಿದೆ. 3 ಕಿಲೋ ಮೀಟರ್ ಉದ್ದದ ಈ ಸೇತುವೆ ದೇಶದ 20 ಅತೀ ಉದ್ದದ ಸೇತುವೆಗಳ ಪೈಕಿ 20 ನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೂ ಇದಕ್ಕೆ ಜೆ ಹೆಚ್ ಪಟೇಲ್ ಅವರ ಹೆಸರನ್ನು ಕೂಡ ಇಡಲಾಗಿದೆ.

2016ರಲ್ಲಿ ಸಂಚಾರ ಸಂಚಾರ ಮುಕ್ತವಾ ಈ ಸೇತುವೆಯು ಬರೋಬ್ಬರಿ 48.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಸದ್ಯ ಈ ಸೇತುವೆ ಬಾಗಲಕೋಟೆ, ವಿಜಯಪುರ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ನೆಚ್ಚಿನ ತಾಣವೂ ಆಗಿದೆ. ಬೈಕ್ ಸವಾರರಂತೂ ಅಲ್ಲೇ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ರೆ, ಮತ್ತೊಂದಿಷ್ಟು ಹೊತ್ತು ಸೇತುವೆ ಸಮೀಪದಲ್ಲೇ ಕಳೆಯುತ್ತಾರೆ. ಸೆಲ್ಫೀ ಕ್ಲಿಕ್ಕಿಸುತ್ತಾ ಎಂಜಾಯ್ ಮಾಡ್ತಾರೆ.

ಕೋರ್ತಿ ಕೊಲ್ಹಾರ ಸೇತುವೆಯ ಸುಂದರ ದೃಶ್ಯಗಳು



ಇನ್ನು ಈ ರಸ್ತೆ ಸೇತುವೆ ಮೇಲೆ ನಿಂತು ಕೃಷ್ಣಾ ನದಿಯ ಸೊಬಗು, ಬೆಳಗಿನ ಜಾವದ ಸೂರ್ಯೋದಯ, ಸಂಜೆಯಾಗುತ್ತಲೇ ಸೂರ್ಯಾಸ್ತ ಕಣ್ತುಂಬಿಕೊಳ್ಳಲು ನೂರಾರು ಜನರು ಹಾಜರಾಗ್ತಾರೆ. ಜೊತೆಗೆ ಕಣ್ಣು ಹಾಯಿಸಿದಷ್ಟು ಕೃಷ್ಣ ನದಿಯ ಜಲರಾಶಿಯ ಶಾಂತವಾದ ಹರಿವು ಇನ್ನಷ್ಟು ಮುದ ನೀಡುತ್ತದೆ.

ನವೀನ ಹಳೆಯದು