ರನ್ನನ ನಾಡು ಮುಧೋಳ ನಗರದಲ್ಲಿ ಕನ್ನಡದ ಕಗ್ಗೊಲೆ


ಮುಧೋಳ: ಕಲೆ, ಸಾಹಿತ್ಯಕ್ಕೆ ಹೆಸರಾದ ಹಾಗೂ ಕನ್ನಡ ಸಾಹಿತ್ಯಕ್ಕೆ ಅಭೂತ ಕೊಡುಗೆ ನೀಡಿದ ರನ್ನನ ತವರೂರಾದ ಮುಧೋಳ ನಗರದಲ್ಲಿ ದಿನೇ ದಿನೇ ಕನ್ನಡ ಮಾಯವಾಗುತ್ತಿದೆ. ಆಡಳಿತದಲ್ಲಿ ಹಾಗೂ ಬಳಕೆಯಲ್ಲಿ ಕಡ್ಡಾಯ ಕನ್ನಡಕ್ಕಾಗಿ ಸರ್ಕಾರಗಳು ಹಾಗೂ ಕನ್ನಡ ಹೋರಾಟಗಾರರು ಒಂದೆಡೆ ಹೋರಾಡುತ್ತಿದ್ದರೆ ಇನ್ನೊಂದೆಡೆ ಕೆಲ ಸಾರ್ವಜನಿಕರು ಹಾಗೂ ಉದ್ಯಮಿದಾರರು ಕನ್ನಡದ ಅಸ್ಮಿತೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.

ನಗರದಲ್ಲಿ ಮಾಯವಾಗುತ್ತಿರುವ ಕನ್ನಡ
ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಪಟ್ಟು ನಗರದ ಕೆಲ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮೇಲೆ ಸಂಪೂರ್ಣವಾಗಿ ಕನ್ನಡವನ್ನು ಕಡೆಗಣಿಸಿದ್ದಾರೆ ಇನ್ನು ಕೆಲ ಅಂಗಡಿಗಳು ನೆಪ ಮಾತ್ರಕ್ಕೆ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಚಿಕ್ಕದಾಗಿ ನಮೂದಿಸಿದ್ದಾರೆ. ಉತ್ತರ ಕರ್ನಾಟಕದ ಮಧ್ಯ ಭಾಗದಲ್ಲೇ ಈ ರೀತಿಯಾದರೆ ಕನ್ನಡ ಉಳಿಯುವುದು ಹೇಗೆ

ನಗರಸಭೆಗೆ ಇದರ ಬಗ್ಗೆ ಅರಿವಿಲ್ಲವೆ?
ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಿಬಿಎಂಪಿ ಈಗಾಗಲೇ ಅಂಗಡಿಗಳ ಮೇಲೆ ಕಡ್ಡಾಯ ಕನ್ನಡ ಹಾಗೂ ಹೊಸ ಸ್ಥಾಪಿಸಲ್ಪಟ್ಟ ಅಂಗಡಿಗಳ ಮೇಲೆ ಕನ್ನಡ ಇರದಿದ್ದರೆ ಅಂತಹ ಅಂಗಡಿಗಳಿಗೆ ಪರವಾನಿಗೆ ನೀಡುವುದುದನ್ನು ನಿಷೇಧಿಸಿದ್ದಾರೆ. ಅಂತಹ ಒಂದು ಕಾನೂನು ನಗರಸಭೆಗೆ ಗೊತ್ತಿಲ್ಲವೆ? ಗೊತ್ತಿದ್ದರೂ ಯಾಕೆ ಕನ್ನಡದ ಅಸ್ಮಿತೆಗೆ ಧಕ್ಕೆ ತರುವಂಥ ಇಂತಹ ಕಾರ್ಯಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ.? ಎಂಬುದು ಪ್ರಶ್ನಾರ್ಹವಾಗಿದೆ
ನವೀನ ಹಳೆಯದು