ಮುಧೋಳ ವಿಧಾನಸಭಾ ಕ್ಷೇತ್ರದ 2018ರ ಚುನಾವಣಾ ಮಾಹಿತಿ ಹಾಗೂ ಈ ಸಲದ ರಾಜಕೀಯ ವಿಶ್ಲೇಷಣೆ


ಮುಧೋಳ : ಮುಧೋಳ ವಿಧಾನಸಭಾ ಕ್ಷೇತ್ರವು 2018 ರಲ್ಲಿ ಮುಧೋಳ ತಾಲೂಕಿನಲ್ಲಿ 2,85,915 ಜನಸಂಖ್ಯೆ ಇದ್ದರು, ಇಲ್ಲಿ 142961 ಪುರುಷರು ಹಾಗೂ 142954 ಮಹಿಳೆಯರು ಇದ್ದರು.  ಹಾಗೂ ಕ್ಷೇತ್ರದಲ್ಲಿ ಒಟ್ಟು 1,91,946 ಮತದಾರರಿದ್ದು, ಈ ಪೈಕಿ 95,193 ಪುರುಷರು ಹಾಗೂ 96,726 ಮಹಿಳೆಯರು ಇದ್ದರು. ಹಾಗೂ ಈ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇಕಡ 75.56 ರಷ್ಟು ಮತದಾನವಾಗಿತ್ತು.

2018 ರ ಚುನಾವಣಾ ಕದನ

ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ನೇರ ಕದನ ಏರ್ಪಟ್ಟಿತ್ತು ಆದರೆ ಅಂತಿಮವಾಗಿ ಬಿಜೆಪಿಯ ಗೋವಿಂದ ಕಾರಜೋಳ 76431 ಮತಗಳನ್ನು ಪಡೆಯುವ ಮೂಲಕ ತಮ್ಮ ಐದನೇ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದರು.

ಹಾಗೂ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದ ಹಾಗೂ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸತೀಶ್ ಬಂಡಿವಡ್ದರ್ 60949 ಮತಗಳನ್ನು ಪಡೆದು 15482 ಮತಗಳ ಅಂತರದಿಂದ ಪರಾಭವಗೊಂಡು ಬಲಿಷ್ಠ ಪ್ರತಿಸ್ಪರ್ಧಿ ಎಂಬ ಸಂದೇಶವನ್ನು ರವಾನಿಸಿದ್ದರು.

ಹಾಗೆಯೇ ಜೆಡಿಎಸ್ ನ ಶಂಕರ್ ನಾಯಕ್ 4431 ಮತಗಳನ್ನು ಪಡೆದರೆ ರೈತ ಸಂಘದ ಬಸವಂತ ಕಾಂಬಳೆ 2088 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ 1608 ನೋಟಾ ಮತಗಳು ಕೂಡ ಬಿದ್ದಿದ್ದವು.

ಸದ್ಯದ ಚುನಾವಣಾ ಕಣ ಮತ್ತು ವಿಶ್ಲೇಷಣೆ

ಸತ್ಯ ಬಿಜೆಪಿಯ ಅಲಿಖಿತ ನಿಯಮದಂತೆ 75 ವರ್ಷ ವಯಸ್ಸು ಪೂರೈಸಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಹೀಗಾಗಿ ಬಿಜೆಪಿಯಲ್ಲಿ ಈಗಾಗಲೇ ಅನೇಕ ಹಿರಿಯ ನಾಯಕರು ಸ್ವಯಂ ಪ್ರೇರಿತ ನಿವೃತ್ತಿ ತೆಗೆದುಕೊಂಡಿದ್ದಾರೆ. ಆದರೆ ಮುಧೋಳ ವಿಧಾನಸಭೆ ಕ್ಷೇತ್ರದ ಬಿಜೆಪಿ ನಾಯಕ ಗೋವಿಂದ ಕಾರಜೋಳರ ಸದ್ಯದ ವಯಸ್ಸು 72 ವರ್ಷ ಆ ನಿಯಮದಂತೆ ಅವರಿಗೆ ಈ ವರ್ಷವೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ . ಕೆಲ ಊಹಾಪೋಹಗಳಂತೆ ಅವರ ಸುಪುತ್ರ ಅರುಣ್ ಕಾರಜೋಳ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ಗಾಳಿಮಾತು ಕೂಡ ಹರಿದಾಡುತ್ತಿದೆ. ಆದರೆ ಸದ್ಯ ಬಿಜೆಪಿಗೆ ಹೊಸ ಮುಖಗಳ ಪ್ರಯೋಗ ಬೇಡವಾಗಿದೆ ಯಾಕಂದ್ರೆ ನಿವೃತ್ತಿ ವಯಸ್ಸು ಆಗಿದ್ದರೂ ಕೂಡ ಗೆಲ್ಲುವ ಕುದುರೆಗಳನ್ನೇ ಚುನಾವಣೆಗೆ ನಿಲ್ಲಿಸಿ ಶತಾಯಗತಾಯ ಬಹುಮತ ಪಡೆದು ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವುದು ಹಾಗೂ ಎರಡು ಮೂರು ವರ್ಷಗಳ ನಂತರ ನಿವೃತ್ತಿಯಾಗುವ ಶಾಸಕರು ಅಥವಾ ಸದಸ್ಯರುಗಳ ಪರ್ಯಾಯ ಅಭ್ಯರ್ಥಿ ಅಥವಾ ಅವರ ಕುಟುಂಬದ ಸದಸ್ಯರುಗಳಿಗೆ ಟಿಕೆಟ್ ನೀಡಿ ಉಪಚುನಾವಣೆ ನಡೆಸುವ ತಂತ್ರಗಾರಿಕೆಯನ್ನು ಹೊಂದಲಾಗಿದೆ ಎನ್ನಬಹುದು.

ಇನ್ನು ಇತ್ತ ಕಾಂಗ್ರೆಸ್ ನಲ್ಲಿ ಸ್ಪರ್ಧೆಗೆ ಇಬ್ಬರು ಪ್ರಬಲ ಆಕಾಂಕ್ಷಿಗಳಿರುವುದರಿಂದ ಭಿನ್ನಮತ ಸಂಭವಿಸುವುದು ಸರ್ವೇಸಾಮಾನ್ಯ ಇಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೂ ಕೂಡ ಬಿಜೆಪಿಯಷ್ಟೇ ಸರ್ಕಾರ ಸ್ಥಾಪಿಸುವ ಮಹತ್ವ ಉದ್ದೇಶವಿದೆ ಹೀಗಾಗಿ ರಾಜ ನಾಯಕರು ಮುಧೋಳ ಕ್ಷೇತ್ರದಲ್ಲಿನ ಕಾಂಗ್ರೆಸ್ ದಲ್ಲಿರುವ ಭಿನ್ನಮತವನ್ನು ಶಮನಗೊಳಿಸಿ ಶತಾಯಗತಾಯ ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವುದು ಪ್ರತಿಷ್ಠೆಯ ಖಣವಾಗಿ ಪರಿಣಮಿಸಿದೆ ಬಂಡಿವಡ್ಡರವರಿಗೆ ಟಿಕೆಟ್ ನೀಡುವುದು ಹಾಗೂ ಚುನಾವಣೆಯಲ್ಲಿ ಬಂಡಿವಡ್ಡರ ಗೆಲ್ಲಲಿ ಅಥವಾ ಸೋಲಲಿ ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಿಮ್ಮಾಪುರ ಅವರನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡುವುದು ಹಾಗೂ ಮೀಸಲು ಕ್ಷೇತ್ರದ ಮಂತ್ರಿ ಪದವಿಯನ್ನು ನೀಡುವ ಷರತ್ತು ಬದ್ಧ ಟಿಕೆಟನ್ನು ಬಂಡಿವಡ್ಡರವರಿಗೆ ನೀಡುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲಿರುವ ತಂತ್ರಗಾರಿಕೆ ಮತ್ತು ಸ್ಪರ್ಧಿಗಳ ಆಯ್ಕೆಯ ಊಹಾಪೋಹಗಳಿಗೆ ಪಕ್ಷಗಳ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ಶೀಘ್ರವೇ ಇತಿಶ್ರೀ ಹಾಡಲಿದೆ

ಇದರ ಹಿನ್ನೆಲೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಲ್ಲೂ ಪ್ರಚಾರ ಕಾರ್ಯಗಳು ಪ್ರಾರಂಭವಾಗಿವೆ ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿರುವ ಬಿರುಸಿನ ಪ್ರಚಾರ ಚಟುವಟಿಕೆಗಳು ಜೆಡಿಎಸ್ ಆಗಲಿ ಅಥವಾ ಇನ್ಯಾವುದೇ ರಾಜಕೀಯ ಪಕ್ಷಗಳಲ್ಲಿ ಕಂಡು ಬರುತ್ತಿಲ್ಲ ಹೀಗಾಗಿ ಈ ಸಲ ಸ್ಪರ್ಧೆ ನೇರಾನೇರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಏರ್ಪಡಲಿದೆ.

ರಾಜಕೀಯ ಪಕ್ಷಗಳ ಹಾಗೂ ನಾಯಕರ ತಂತ್ರಗಾರಿಕೆ ಏನೇ ಇರಲಿ ಆದರೆ ಕೊನೆಯಲ್ಲಿ ಪ್ರಜೆಗಳ ಮನೆಗೆದ್ದು ಚುನಾವಣೆಯಲ್ಲಿ ಗೆಲ್ಲುವುದೇ ನಿಜವಾದ ತಂತ್ರ. ಚುನಾವಣೆಯಲ್ಲಿ ಏನೇ ಗಿಮಿಕ್ ಮಾಡಿದರು ಕೊನೆಯಲ್ಲಿ ಸ್ಪರ್ಧಿಗಳ ಹಣೆಬರಹ ಬರೆಯುವುದು ಮಾತ್ರ ಪ್ರಜೆಗಳು ಆದರೆ ಪ್ರಜೆಗಳು ಆಯ್ಕೆ ಮಾಡಿದ ನಾಯಕ ಮುಂದಿನ ಐದು ವರ್ಷಗಳಿಗೆ ಪ್ರಜೆಗಳ ಹಣೆಬರಹ ನಿರ್ಧರಿಸಬೇಕಾಗುತ್ತದೆ ಹೀಗಾಗಿ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು.

ನವೀನ ಹಳೆಯದು