ಬಾಗಲಕೋಟೆ ಜಿಲ್ಲೆಯ ಮರ್ಚಂಟ್ ಪತ್ತಿನ ಸಹಕಾರಿ ಸಂಘ ನಿ.ಕೆರೂರದಲ್ಲಿ ಖಾಲಿ ಇರುವ 08 ದ್ವಿತೀಯ ದರ್ಜೆ ಸಹಾಯಕ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಹೆಸರು: ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ
ಒಟ್ಟು ಹುದ್ದೆಗಳು 08
ಅರ್ಜಿ ಸಲ್ಲಿಸುವ ಬಗೆ: ಆಫ್ಲೈನ್
ದ್ವಿತೀಯ ದರ್ಜೆ ಸಹಾಯಕ : 05
ಸಿಪಾಯಿ : 03
ವಿದ್ಯಾರ್ಹತೆ:
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯ /ಸಂಸ್ಥೆಯಿಂದ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡ ಮಾದ್ಯಮದಲ್ಲಿ ಮಾತ್ರ ವ್ಯಾಸಂಗವನ್ನು ಮಾಡಿರಬೇಕು.
ಸಿಪಾಯಿ ಹುದ್ದೆಗಳಿಗೆ ಎಸೆಸೆಲ್ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕನ್ನಡ ಮಾದ್ಯಮದಲ್ಲಿ ಮಾತ್ರ ವ್ಯಾಸಂಗವನ್ನು ಮಾಡಿರಬೇಕು.
ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷಗಳು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ವೇತನಶ್ರೇಣಿ
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ 16000/- ರಿಂದ 29600/- – ಸಿಪಾಯಿ ಹುದ್ದೆಗಳಿಗೆ 10400/- ರಿಂದ 16400/- ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಸಾಮಾನ್ಯ ಅಭ್ಯರ್ಥಿಗಳು 1000 /- ರೂ ಅರ್ಜಿ ಶುಲ್ಕವನ್ನು ಎಸ್ಸಿ/ಎಸ್ಟಿ ಅಭ್ಯರ್ಥಿಗಳು 500 /- ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸಿಪಾಯಿ ಹುದ್ದೆಗಳಿಗೆ ಸಾಮಾನ್ಯ ಅಭ್ಯರ್ಥಿಗಳು 500 /- ರೂ ಅರ್ಜಿ ಶುಲ್ಕವನ್ನು ಎಸ್ಸಿ/ಎಸ್ಟಿ ಅಭ್ಯರ್ಥಿಗಳು 250 /- ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ವಿಳಾಸ : ಮರ್ಚನಂಟ್ಸ್ ಪತ್ತಿನ ಸಹಕಾರಿ ಸಂಘ ನಿ. ಕೆರೂರ, ತಾ|| ಬಾದಾಮಿ, ಜಿ|| ಬಾಗಲಕೋಟೆ ಪಿನ್ ಕೋಡ್-587206
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 14 ಫೆಬ್ರುವರಿ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3 ಮಾರ್ಚ್ 2023
ನೋಟಿಫಿಕೇಶನ್ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ