ಮುಧೋಳ: ಮುಧೋಳ ನಗರದಲ್ಲಿ ಹೊಸ ನ್ಯಾಯಬೆಲೆ ಅ೦ಗಡಿ ಮಂಜೂರು ಮಾಡುವ ಸಲುವಾಗಿ ಅರ್ಹ ಸ೦ಘ ಸಂಸ್ಥೆಗಳಿ೦ದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಹಕಾರಿ ಸಂಘವು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು, ಹಿ೦ದಿನ ಎರಡು ವರ್ಷಗಳಲ್ಲಿ ಕನಿಷ್ಠ 2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ವಿಕಲಚೇತನ ವ್ಯಕ್ತಿಗಳು ಹಾಗೂ ತೃತೀಯ ಲಿಂಗದ ವ್ಯಕ್ತಿಗಳೆಂದು ದೃಢೀಕರಿಸುವ ಬಗ್ಗೆ ವೈದ್ಯಕೀಯ ಅಧಿಕಾರಿಗಳಿ೦ದ ಪಡೆದ ದೃಢೀಕರಣ ಪತ್ರ ಹಾಜರುಪಡಿಸಬೇಕು. ಅರ್ಜಿಗಳನ್ನು ಮುಧೋಳ ತಹಸೀಲ್ದಾರ್ ಕಚೇರಿಯಿ೦ದ ಪಡೆದುಕೊ೦ಡು ಭರ್ತಿ ಮಾಡಿದ ಅರ್ಜಿಯನ್ನು ಮಾ.1ರ ಸಂಜೆ 5.30 ರೊಳಗಾಗಿ ಮುಧೋಳ ತಹಸೀಲ್ದಾರ್ ಕಚೇರಿಗೆ ಸಲ್ಲಿಸುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.