ಮುಧೋಳ: ಕರ್ನಾಟಕ ವಿಧಾನಸಭೆ ಚನಾವಣೆ ಸಾಮೀಪ್ಯ ಹಿನ್ನೆಲೆ ಮುಧೋಳ ನಗರದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ಪೊಲೀಸ್ ಮತ್ತು ಯೋಧರ ಪಥ ಸಂಚಲನ ನಡೆಯಿತು.
ಡಿವೈಎಸ್ಪಿ ಶಾಂತವೀರ ಸಿಪಿಐ ಆಯ್ಯನಗೌಡ ಪಾಟೀಲ್, ಪಿ ಎಸ್ ಐ ಸಂಗಮೇಶ್ ಹೊಸಮನಿ, ಮಲ್ಲಿಕಾರ್ಜುನ್ ಬಿರಾದಾರ್ ನೇತೃತ್ವದಲ್ಲಿ ಪ್ಯಾರಾ ಕಮಾಂಡ್ ತಂಡದೊಂದಿಗೆ ಪಥ ಸಂಚಲನ ನಡೆಯಿತು.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಪ್ಯಾರಾ ಕಮಾಂಡ್ ತಂಡ ಜಂಟಿಯಾಗಿ ಈ ಪಥಸಂಚಲನವನ್ನು ನಗರದ ಪ್ರಮುಖ ಬೀದಗಳಲ್ಲಿ ನಡೆಸಲಾಯಿತು.