ಬಾಗಲಕೋಟೆ: ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಫೆ.15, 16, 17 ಹಾಗೂ 21 ರಂದು ವಿವಿಧ ತಾಲೂಕಾ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಫೆ. 15 ರಂದು ಬೆ.10.30 ರಿಂದ ಮ.2 ವರೆಗೆ ಬಾಗಲಕೋಟೆ ಲೋಕಾಯುಕ್ತ ಕಚೇರಿ ಮತ್ತು ಮುಧೋಳ ಪಿಡಬ್ಲ್ಯೂಡಿ ನಿರೀಕ್ಷಣಾ ಮಂದಿರ, 16 ರಂದು ಬೀಳಗಿ ಜಿ.ಎಲ್.ಬಿ.ಸಿ ನಿರೀಕ್ಷಣಾ ಮಂದಿರ, 17 ರಂದು ಗುಳೇದಗುಡ್ಡ ಪಿಡಬ್ಲೂಡಿ ನಿರೀಕ್ಷಣಾ ಮಂದಿರ, ಜಮಖಂಡಿ ಮತ್ತು ರಬಕವಿ-ಬನಹಟ್ಟಿ ರಮಾನಿವಾಸ ಪ್ರವಾಸ ಮಂದಿರ ಹಾಗೂ 21 ರಂದು ಹುನಗುಂದ ಮತ್ತು ಇಲಕಲ್ಲ ತಾಲೂಕಿನ ಅಹವಾಲುಗಳನ್ನು ಇಲಕಲ್ಲ ಪಿಡಬ್ಲೂಡಿ ನಿರೀಕ್ಷಣಾ ಮಂದಿರದಲ್ಲಿ ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08354-236200, 295170ಗೆ ಸಂಪರ್ಕಿಸಬಹುದು.