ಮಹಾಲಿಂಗಪುರ ಜನತೆಯ ಬಹುದಿನಗಳ ಕನಸಾಗಿದ್ದ ಮಹಾಲಿಂಗಪುರ ನೂತನ ಬಸ್ ನಿಲ್ದಾಣ ಉದ್ಘಾಟನೆಗೊಂಡಿದೆ. ಅರ್ಧ ಶತಮಾನದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಈ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಮಹಾಲಿಂಗಪುರ ಪಟ್ಟಣದ ನೂತನ ಬಸ್ ನಿಲ್ದಾಣ ಇಂದು ಉದ್ಘಾಟನೆಗೊಂಡಿತು.
ಸಂಸದರಾದ ಶ್ರೀ ಪಿ. ಸಿ. ಗದ್ದಿಗೌಡರ, ತೇರದಾಳ ಮತಕ್ಷೇತ್ರದ ಶಾಸಕ ಶ್ರೀ ಸಿದ್ದು ಸವದಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ. ಬಸವರಾಜ ಎಸ್. ಕೆಲಗಾರ, ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಶ್ರೀ ನಿತಿನ್ ಹೆಗಡೆ, ವಿಭಾಗೀಯ ಸಂಚಾರ ಅಧಿಕಾರಿಗಳು ಶ್ರೀ ಪಿ. ವಿ. ಮೇತ್ರಿ, ಮುಖ್ಯ ಕಾಮಗಾರಿ ಅಭಿಯಂತರರು ಶ್ರೀ ಪ್ರಕಾಶ ಕಬಾಡಿ, ಸೇರಿದಂತೆ ವಿಭಾಗದ ಸಮಸ್ತ ಅಧಿಕಾರಿಗಳು, ಸ್ಥಳೀಯ ಮುಖಂಡರು, ಗಣ್ಯ ಮಾನ್ಯರು ಉಪಸ್ಥಿತರಿದ್ದರು.