ಮಹಾಲಿಂಗಪುರ ತೆರಬಂಡಿ ವೈಭವ ಮೊದಲ 3 ಬಹುಮಾನಗಳನ್ನೂ ಬಾಚಿಕೊಂಡ ಮುಧೋಳ ತಾಲೂಕಿನ ಎತ್ತುಗಳು

ಮಹಾಲಿಂಗಪುರ: ಬಸವೇಶ್ವರ ಜಾತ್ರೆಯ 50ನೇ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ಬಸವೇಶ್ವರ ಜಾತ್ರಾ ಕಮೀಟಿ ಮಹಾಲಿಂಗಪುರ ವತಿಯಿಂದ ಅಂತರ್ ರಾಜ್ಯ ಮಟ್ಟದ ತೆರಬಂಡಿ ವೈಭವದ ಸ್ಪರ್ಧೆಗೆ ಅಭೂತಪೂರ್ವ ಯಶಸ್ವಿಯೊಂದಿಗೆ ತೆರೆ ಕಂಡಿತು.

ಸುಮಾರು 30 ಸಾವಿರ ಜನ ಈ ಸ್ಪರ್ಧೆಯನ್ನು ವೀಕ್ಷಿಸಲು ನೆರೆದಿದ್ದರು. ಇನ್ನೂ ವಿಶೇಷವೆಂದರೆ ಮೊದಲ 3 ಬಹುಮಾನಗಳನ್ನೂ ಮುಧೋಳ ತಾಲೂಕಿನ ಎತ್ತುಗಳು ಬಾಚಿಕೊಂಡಿದ್ದು ವಿಶೇಷ.

ತೆರೆಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಠ್ಠಲ ಮ್ಯಾಗಡಿ, ದ್ವಿತೀಯ ಸ್ಥಾನ ಅಕ್ಕಿಮರಡಿಯ ಕುಮಾರ, ತೃತೀಯ ಸ್ಥಾನ ಒಂಟಿಗೋಡಿ ಬುಲ್ಸ್ ರೈತರ ಎತ್ತುಗಳು ಬಹುಮಾನವನ್ನು ಬಾಚಿಕೊಂಡಿವೆ.



ನವೀನ ಹಳೆಯದು