ಮುಧೋಳ: ನಗರದ ಹೊರವಲಯದ ಮಂಟೂರು ರಸ್ತೆಯ ಜಯ ವಿಜಯ ಪ್ರಾಥಮಿಕ ಶಾಲೆಯ ಹತ್ತಿರ ಮದುವೆ ಮುಗಿಸಿಕೊಂಡು ಮರಳಿ ತೆರಳುವಾಗ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಘಟನೆ ನಡೆದಿದ್ದು ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಮುಗಳಖೋಡ ಗ್ರಾಮದ 28 ವರ್ಷದ ಪ್ರೇಮಾ ಸುಣಗಾರ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪಿಎಸ್ಐ ಸಂಗಮೇಶ್ ಹೊಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.