ಮುಧೋಳ: ಸಾಮಾನ್ಯವಾಗಿ ಒಂದು ಎತ್ತಿನ ಬೆಲೆ ಹೆಚ್ಚೆಂದರೆ 20,000 ದಿಂದ 30,000 ರೂಪಾಯಿ ಇರಬಹುದು. ಅಥವಾ ಇನ್ನೂ ಸ್ವಲ್ಪ ಹೆಚ್ಚೆಂದರೆ ಒಂದು ಲಕ್ಷ ರೂಪಾಯಿವರೆಗೂ ಇರಬಹುದು. ಆದರೆ ನಮ್ಮ ಮುಧೋಳ ಎತ್ತು ಬರೋಬ್ಬರಿ 12,25,000 ರೂಪಾಯಿಗಳಿಗೆ ಮಾರಾಟವಾಗಿದೆ ಎಲ್ಲರ ಹುಬ್ಬು ಏರುವಂತೆ ಮಾಡಿದೆ. ತಾಲೂಕಿನ ಪಿಎಂ ಬುದ್ನಿ ಗ್ರಾಮದ ಸಿದ್ದು ಪೂಜಾರಿ ಅವರ ಎತ್ತು ಇಂಥದೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಚಿಂಚನ ಮುಡಿಯೇರಿದ ಹಣ, ಚಿನ್ನ ಮತ್ತು ಬೈಕ್ ಎಷ್ಟು ಗೊತ್ತಾ?
“ಚಿಂಚ” ಎಂದೇ ಮನೆಮಾತಾಗಿರುವ ಈ ಎತ್ತು ತೆರೆಬಂಡಿ ಸ್ಪರ್ಧೆಯಲ್ಲಿ ಇಲ್ಲಿವರೆಗೂ ಗೆದ್ದಿದ್ದು ಬರೊಬ್ಬರಿ 30 ಲಕ್ಷ ರೂಪಾಯಿ ಹಣ, 130 ಗ್ರಾಂ ಚಿನ್ನ ಹಾಗೂ ಎಂಟು ಬೈಕ್ ಗಳನ್ನು ಬಹುಮಾನವಾಗಿ ಪಡೆದು ತನ್ನ ಹಿರಿಮೆಯನ್ನು ಸಾರಿದೆ. ಇಂತಹ ಹೆಮ್ಮೆಯ ಸ್ಪರ್ಧಾಲು ಎತ್ತನ್ನು ಈಗ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದ ಭೀಮಸಿ ಐನಾಪುರ 12 ಲಕ್ಷ 25 ಸಾವಿರ ರೂಪಾಯಿ ಕೊಟ್ಟು ಖರೀದಿಸಿ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ ಮಹಾಲಿಂಗಪುರ ತೆರಬಂಡಿ ವೈಭವ ಮೊದಲ 3 ಬಹುಮಾನಗಳನ್ನೂ ಬಾಚಿಕೊಂಡ ಮುಧೋಳ ತಾಲೂಕಿನ ಎತ್ತುಗಳು
ಯಾವ ಹಿರೋಗೂ ಕಮ್ಮಿ ಇಲ್ಲದ ಅಭಿಮಾನಿ ಬಳಗ ಈ ಚಿಂಚನಿಗೆ ಇದ್ದಾರೆ.
ನಿಜ ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ತೆರೆಬಂಡಿ ಸ್ಪರ್ಧೆ ಸರ್ವೇಸಾಮಾನ್ಯ ಹಾಗೂ ಇದೊಂದು ಸಾಂಪ್ರದಾಯಿಕ ಮತ್ತು ರೈತಾಪಿ ಸೂಚಕವಾಗಿದೆ. ಉತ್ತರ ಕರ್ನಾಟಕದ ಪ್ರತಿಯೊಂದು ಭಾಗದಲ್ಲಿ ತೆರೆದ ಬಂಡಿ ಸ್ಪರ್ಧೆಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ರೈತರಿಗೆ ಇದೊಂದು ಹಬ್ಬದ ರೀತಿಯ ಮನರಂಜನೆ ಕಾರ್ಯಕ್ರಮವಾಗಿದೆ.
ಒಂದು ವರ್ಷ ಕಾಯಿಲೆಯಿಂದ ನರಳಿ ಮೃತ್ಯು ಹೊಸಿಲಲ್ಲಿ ಇದ್ದ ಎತ್ತು ಮೈ ಕೊಡವಿ ಮೇಲೆದ್ದಿತ್ತು!
2020 ನೆ ಇಸವಿಯಲ್ಲಿ ಚಿಂಚ ಒಂದು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಶೀಘ್ರವೇ ಧಾರವಾಡದ ಪಶು ಆಸ್ಪತ್ರೆಯಲ್ಲಿ ಸೇರಿಸಲಾಯಿತು ಮೂರು ತಿಂಗಳು ಐಸಿಯುನಲ್ಲಿಟ್ಟು ಮಗುವಿನಂತೆ ನೋಡಿಕೊಳ್ಳಲಾಯಿತು. ಮೂರು ಟನ್ ಭಾರ ಇದ್ದ ಚಿಂಚಣ ಭಾರ ಒಂದು ಟನ್ ಗೆ ಇಳಿದು ಮೃತ್ಯು ಸ್ಥಿತಿ ತಲುಪಿತ್ತು. ಎತ್ತಿನ ಚೇತರಿಕೆಗಾಗಿ ಆಡು ಮತ್ತು ಕುರಿಗಳ ಕರಳಿನ ರಸ ಕುಡಿಸಿ ಗುಣಮುಖ ಮಾಡಿ ಚಿಂಚನನ್ನು ಮತ್ತೆ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತೆ ಮಾಡಿ ಆಶ್ಚರ್ಯ ಮೂಡಿಸಿತು. ಈಗ ಇಂತಹ ಚಿಂಚ ದುಬಾರಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.