ಮುಧೋಳ ನಗರಸಭೆಯ 2023-24ನೇ ಸಾಲಿನ ಕರಡು ಆಯ-ವ್ಯಯ (ಬಜೆಟ್) ಅನ್ನು ನಗರಸಭೆ ಅಧ್ಯಕ್ಷ ಮಂಜುನಾಥ ಮಾನೆ ಈಚೆಗೆ ನಗರಸಭೆಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಮಂಡಿಸಿದರು.
ಪ್ರಸಕ್ತ ಸಾಲಿನ ನಗರಸಭೆಯ ಆಯ-ವ್ಯಯದಲ್ಲಿ ಪ್ರಮುಖವಾಗಿ ವಿವಿಧ ತೆರಿಗೆಗಳು, ನೌಕರರ ವೇತನಕ್ಕಾಗಿ ಬರುವ ಸರ್ಕಾರದಿಂದ ಅನುದಾನ, ಅಭಿವೃದ್ಧಿ ಅನುದಾನ ಸೇರಿ ಇತರ ಎಲ್ಲ ಮೂಲಗಳಿಂದ ಒಟ್ಟು 3348.10 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ಈ ಬಾಬತ್ತಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು, ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಮತ್ತು ಭತ್ಯೆಗಳ ಪಾವತಿಗಾಗಿ ಒಟ್ಟು 3337.6 ಲಕ್ಷ ವೆಚ್ಚ ಮಾಡಲಾಗುತ್ತದೆ. ಇದರಿಂದ 10.50 ಲಕ್ಷಗಳ ನಿರೀಕ್ಷಿತ ಉಳಿತಾಯ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗಸಭೆಯ ಉಪಾಧ್ಯಕ್ಷೆ ಸುನೀತಾ ಭೋವಿ ಮತ್ತು ಸದಸ್ಯರು, ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ, ವ್ಯವಸ್ಥಾಪಕಿ ಭಾರತಿದೇವಿ ಜೋಶಿ, ಅಕೌಂಟೆಂಟ್ ಎಂ.ಆರ್.ನದಾಫ, ಕಿರಿಯ ಅಭಿಯಂತರರಾದ ಮಲ್ಲಪ್ಪ ಹೊಸೂರ, ರಾಜು ಚವ್ಹಾನ, ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.