ಮುಧೋಳದಲ್ಲಿರುವ ಸಚಿವ ಮುರುಗೇಶ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ ಉಂಟಾಗಿ ಕಾರ್ಮಿಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಗುರುನಾಥ ಹುಚ್ಚಣ್ಣವರ(27) ಮೃತ ಕಾರ್ಮಿಕ. ಗಾಯಗೊಂಡ ಇತರ ನಾಲ್ವರನ್ನು ಚಿಕಿತ್ಸೆಗಾಗಿ ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಕ್ಕೆ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ. ಮೃತ ಗುರುನಾಥ ಮುಧೋಳ ನಗರದ ಜುಂಜರಕೊಪ್ಪಗಲ್ಲಿ ನಿವಾಸಿ ಎಂದು ತಿಳಿದು ಬಂದಿದೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಲಸಕ್ಕೆ ಸೇರಿದ ಮೊದಲ ದಿನವೇ ಪ್ರಾಣ ಕಳೆದುಕೊಂಡ
ಗುರುನಾಥ ಹುಚ್ಚಣ್ಣವರ(27)
ಕಾರ್ಮಿಕ, ಕುಟುಂಬಸ್ಥರ ಆಕ್ರಂದನ ಹೌದು ಇಲ್ಲಿ ಗುರುನಾಥ ಹುಚ್ಚಣ್ಣವರ ಅವರ ದುರಾದೃಷ್ಟ ಹೇಗಿದೆಯಂದರೆ ಈ ಮೊದಲು ಬೇರೆ ಬೇರೆ ಕಡೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದ ಗುರುನಾಥ, ಸಕ್ಕರೆ ಕಾರ್ಖಾನೆ ಕೆಲಸಕ್ಕೆ ನಿನ್ನೆ ತಾನೆ ಸೇರಿಕೊಂಡಿದ್ದ. ಸೇರಿಕೊಂಡ ಮೊದಲ ದಿನವೇ ತನ್ನ ಪ್ರಾಣವನ್ನು ಕಳೆದುಕೊಂಡಿರುವುದು ನಿಜವಾಗಲೂ ವಿಪರ್ಯಾಸ.
ಗುರುನಾಥ ಪತ್ನಿ ಲಕ್ಷ್ಮಿ, ತಾಯಿ ಮಾದೇವಿ ಅವರ ಗೋಳಾದ ದೃಶ್ಯ ಎಲ್ಲರ ಮನಕಲುಕುತ್ತಿದೆ. ಒಂದು ವರ್ಷದ ಹಿಂದೆ ಲಕ್ಷ್ಮಿ ಎಂಬರನ್ನು ಮದುವೆಯಾಗಿದ್ದ ಆದರೆ ಮಕ್ಕಳ ಇರ್ಲಿಲ್ಲ ತಾಯಿ ಇದ್ದು ತಂದೆಯನ್ನು ಕಳೆದುಕೊಂಡಿದ್ದ. ಗುರುನಾತಯ ತಾಯಿ ಹಾಗೂ ಪತ್ನಿ ಜೊತೆಗೆ ವಾಸವಿದ್ದು,ಇಡೀ ಕುಟುಂಬಕ್ಕೆ ಆಸರೆಯಾಗಿದ್ದ.
ಆದರೆ ಗುರುನಾಥ ಅವರನ್ನು ಕಳೆದುಕೊಂಡ ಪತ್ನಿ ಹಾಗು ತಾಯಿ ಎಲ್ಲರೂ ಕೂಡ ಈಗ ದಿಕ್ಕು ತೋಚದಂತಾಗಿದ್ದಾರೆ ಕುಟುಂಬಕ್ಕೆ ಆಸರೆಯಾಗಿದ್ದಂತವನನ್ನು ಕಳೆದುಕೊಂಡಿದ್ದರಿಂದ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ
ಸಹಜವಾಗಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಇರುವ ಸ್ಥಳ ಅಂದ್ರೆ ತುಂಬಾನೇ ಅಪಾಯಕಾರಿ ಸ್ಥಳ ಅಂತ ಹೇಳಬಹುದು. ಆದರೆ ಆ ಕೆಲಸಕ್ಕೆ ಸೇರಿದ ಮೊದಲ ದಿನವೇ ಅದನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಕಳಿಸಿದ್ದು ಯಡವಟ್ಟು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಯುವಕನ ಮೊದಲ ದಿನವೇ ಶುಚಿತ್ವ ಮಾಡುವ ಕೆಲಸಕ್ಕೆ ಕಳಿಸಿದ್ದು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ಎಂದು ಆರೋಪ ಕೇಳಿಬಂದಿದೆ.