Sheep Husbandry subsidy: ಮೇಕೆ ಘಟಕ ಸ್ಥಾಪನೆಗೆ ಸಹಾಯಧನ


ಬಾಗಲಕೋಟೆ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಜಿಲ್ಲೆಗೆ 33 ಫಲಾನುಭವಿಗಳು ಅದರಲ್ಲಿ ಪರಿಶಿಷ್ಟ ಜಾತಿ 5, ಪರಿಶಿಷ್ಟ ಪಂಗಡ 2, ಸಾಮಾನ್ಯ 26 ಫಲಾನುಭವಿಗಳನ್ನು ಕುರಿ ಮೇಕೆ (10+1) ಘಟಕದ ಸ್ಥಾಪನೆ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು 18 ರಿಂದ 60 ವರ್ಷ ಒಳಗಿನವರಿದ್ದು, ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತರು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪಡೆದು ಪ್ರಕಟಣೆ ದಿನಾಂಕದಿಂದ 15 ದಿನಗಳೊಳಗೆ ಸಲ್ಲಿಸಬಹುದು. ಮಾಹಿತಿಗಾಗಿ ದೂ.ಸಂಖ್ಯೆ 8660264814, 08354-220734. ಸಂಪರ್ಕಿಸಬಹುದು.
ನವೀನ ಹಳೆಯದು