ಮುಧೋಳ: ಸನ್ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ದಿನಾಂಕ 20-11-2022 ರಂದು ಪ್ರಾರಂಭವಾಗಿ ದಿನಾಂಕ : 21-02-2023 ಕ್ಕೆ ಕೇವಲ 93 ದಿನಗಳಲ್ಲಿ 20 ಲಕ್ಷ ಕಬ್ಬನ್ನು ನುರಿಸಿ ಭಾರತ ದೇಶದಲ್ಲಿ ದಾಖಲೆಯ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದೇವೆ ಎಂದು ತಿಳಿಸಲು ಹರ್ಷವೆನಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಾಧನೆಗೆ ಸಹಕಾರ ನೀಡಿದ ಕಾರ್ಖಾನೆಯ ಬೆನ್ನೆಲಬು ಕಬ್ಬು ಪೂರೈಕೆದಾರ ರೈತ ಬಂಧುಗಳೆ, ಸಂಯುಕ್ತ ಸಾರಿಗೆ ಮುಕ್ತದಾರರಿಗೆ ಹಾಗೂ ಕಾರ್ಖಾನೆಯ ಹಿತೈಶಿಗಳಿಗೆ ಎಲ್ಲ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯವರಿಗೆ ಹಾಗೂ ಕೃಷಿ ವಿಭಾಗದ ಪರವಾಗಿ ಹೃತ್ತೂರ್ವಕ ಅಭಿನಂದನೆ ಸಲ್ಲಿಸಿದೆ.
ಇನ್ನೂ ಮುಂದಿನ ದಿನಗಳಲ್ಲಿ ಕೂಡಾ ನೀವು ತಮ್ಮ ಕಾರ್ಖಾನೆಗೆ ಅದೇ ತರಹದ ಸಲಹೆ ಸಹಕಾರ ನೀಡಿ ಒಳ್ಳೆಯ ಗುಣಮಟ್ಟದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಿ ಪ್ರಸಕ್ತ ಹಂಗಾಮನ್ನು ದಾಖಲೆಯ ಯಶಸ್ಸು ಸಾಧಿಸಬೇಕೆಂದು ರೈತರಲ್ಲಿ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.