ಮುಧೋಳ: ಕರ್ನಾಟಕದ ಮುಧೋಳ ಬೇಟೆನಾಯಿ ತಳಿಯನ್ನು ಭಾರತೀಯ ಸೇನೆಯ ಸೇವೆಗೆ ಬಳಸಿಕೊಳ್ಳಲು ಆರ್ವಿಸಿ ತರಬೇತಿ ನೀಡುತ್ತದೆ. ಮುಧೋಳ ನಾಯಿಯು ಸೇನಾ ಕರ್ತವ್ಯಕ್ಕಾಗಿ ತರಬೇತಿ ಪಡೆದ ಮೊದಲ ಭಾರತೀಯ ಶ್ವಾನ ತಳಿಯಾಗಿದೆ.
ಭಾರತೀಯ ಸೇನೆಯ ಶ್ವಾನ ಘಟಕಗಳಲ್ಲಿ ಲ್ಯಾಬ್ರಡಾರ್ಗಳು, ಜರ್ಮನ್ ಶೆಫರ್ಡ್ಸ್, ಬೆಲ್ಜಿಯನ್ ಮಾಲಿನೋಯಿಸ್ ಮತ್ತು ಗ್ರೇಟ್ ಮೌಂಟೇನ್ ಸ್ವಿಸ್ ಡಾಗ್ಸ್ ಸೇರಿವೆ. 2019 ರಲ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆ ಪ್ರಕಾರ, ಸೇನೆಯು 25 ಪೂರ್ಣ ನಾಯಿ ಘಟಕಗಳು ಮತ್ತು ಎರಡು ಅರ್ಧ ಘಟಕಗಳನ್ನು ಹೊಂದಿದೆ. ಪೂರ್ಣ ಘಟಕವು 24 ನಾಯಿಗಳನ್ನು ಹೊಂದಿದ್ದರೆ, ಅರ್ಧ ಘಟಕವು 12 ನಾಯಿಗಳನ್ನು ಒಳಗೊಂಡಿರುತ್ತದೆ.
ಮಿಲಿಟರಿ ನಾಯಿಗಳನ್ನು ಗಾರ್ಡ್ ಡ್ಯೂಟಿ, ಗಸ್ತು ತಿರುಗುವುದು, ಸ್ಪೋಟಕಗಳನ್ನು ಪತ್ತೆ ಮಾಡುವುದು, ಗಣಿಗಳನ್ನು ಪತ್ತೆ ಮಾಡುವುದು, ಮಾದಕ ದ್ರವ್ಯಗಳು ಸೇರಿದಂತೆ ನಿಷಿದ್ಧ ಪದಾರ್ಥಗಳನ್ನು ಪತ್ತೆ, ಸಂಭಾವ್ಯ ಗುರಿಗಳ ಮೇಲೆ ದಾಳಿ, ಪರಾರಿಯಾಗಿರುವವರನ್ನು ಮತ್ತು ಭಯೋತ್ಪಾದಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.
ಏನಿದು ಆರ್ವಿಸಿ?:
ರಿಮೌಂಟ್ ವೆಟರ್ನರಿ ಕೋರ್ (ಆರ್ವಿಸಿ) ಭಾರತೀಯ ಸೇನೆಯ ಒಂದು ಶಾಖೆಯಾಗಿದೆ. ಸೈನ್ಯದಲ್ಲಿ ಬಳಸುವ ಎಲ್ಲಾ ಪ್ರಾಣಿಗಳ ಸಂತಾನೋತ್ಪತ್ತಿ, ಪಾಲನೆ ಮತ್ತು ತರಬೇತಿಯ ಜವಾಬ್ದಾರಿಯನ್ನು ಇದು ನಿರ್ವಹಿಸುತ್ತದೆ. 1920 ಡಿಸೆಂಬರ್ 14ರಂದು ಇದನ್ನು ಸ್ಥಾಪಿಸಲಾಯಿತು.