ಜಮಖಂಡಿ 08: ಶೈಕ್ಷಣಿಕ ಮೌಲ್ಯಮಾಪನದಿಂದ ಎಲ್ಲ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸ್ವಮೌಲ್ಯಮಾಪನಕ್ಕೆ ಅನುಕೂಲವಾಗುತ್ತದೆ. ಮಕ್ಕಳ ಗುಣಾತ್ಮಕ ಶಿಕ್ಷಣ ಹಿತದೃಷ್ಟಿಯಿಂದ ಬೆಳಿಗ್ಗೆಯಿಂದ ಸಂಜೆವರೆಗೆ ಶಿಕ್ಷಕರು ಮಕ್ಕಳೊಂದಿಗೆ ಇದ್ದು, ಅವರ ಚಟುವಟಿಟಕೆಗಳನ್ನು ಗಮನಿಸಬೇಕು. ಅನೇಕ ಮಕ್ಕಳಲ್ಲಿ ವಿವಿಧ ಬಗೆಯ ಕೌಶಲ್ಯಗಳಿದ್ದು, ಅವುಗಳನ್ನು ಗುರುತಿಸುವ ಕಾರ್ಯದಲ್ಲಿ ಶಿಕ್ಷಕರು ತೊಡಗಬೇಕು ಎಂದು ಬಿಈಓ ಅಶೋಕ ಬಸಣ್ಣವರ ಹೇಳಿದರು.
ತಾಲೂಕಿನ ಕೊಣ್ಣೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಾಲೆಗೆ ಭೇಟಿ ಶೈಕ್ಷಣಿಕ ತಪಾಸಣೆ ನಡೆಸಿ ಮಾತನಾಡಿದರು. ತಾಲೂಕಿನಲ್ಲಿ ಅಧಿಕಾರಿಗಳನ್ನೊಳಗೊಂಡ ಶೈಕ್ಷಣಿಕ ತಂಡವನ್ನು ರಚಿಸಿದ್ದು, ಈ ತಂಡ ಪ್ರತಿ ಶಾಲೆಗೆ ಪ್ರಾರ್ಥನೆ ವೇಳೆಯಿಂದ ಸಂಜೆ 4:30 ವರೆಗೆ ಹಾಜರಿದ್ದು, ಶೈಕ್ಷಣಿಕ ಜೊತೆ ಆಡಳಿತಾತ್ಮಕ ಸುಧಾರಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಬೇಕು. ಮಕ್ಕಳಿಗೆ ಪ್ರಾರ್ಥನಾ ವೇಳೆಗೆ ಹಾಜರಾಗಿ ಪ್ರಾರ್ಥನೆ ಮಹತ್ವ, ಶಿಸ್ತು, ಪ್ರಾರ್ಥನಾ ಪ್ರಾಮುಖ್ಯತೆ ಇತರೆ ಪ್ರಮುಖ ವಿಷಯ ತಿಳಿಸಬೇಕು ಎಂದರು.
ನಂತರ ಎಲ್ಲ ವರ್ಗಕೋಣೆ ವೀಕ್ಷಣೆ ಮಾಡಿ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ, ಸಿಬ್ಬಂದಿ ಸಭೆಯಲ್ಲಿ ಕೆಲವು ಸೂಕ್ತ, ಸಲಹೆ ಮಾರ್ಗದರ್ಶನ ನೀಡಿದರು. ಸಂತೋಷ ತಳಕೇರಿ, ಶಿವು ಯಾದವಾಡ, ಮಮದಾಪುರ, ಕೊಣ್ಣೂರ, ಭೀಮು ಮುಧೋಳ, ಲಕ್ಕಪ್ಪಗೋಳ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಮೌನೇಶ ಬಡಿಗೇರ, ಸದಸ್ಯ ಸಂಜಯ್ ಮೇತ್ರಿ ಉಪಸ್ಥಿತರಿದ್ದರು.