ಪಟ್ಟಣದ ಆರಾಧ್ಯ ದೈವ ಶ್ರೀ ಲೋಕೇಶ್ವರ ದೇವಸ್ಥಾನದ ಶ್ರೀ ಲೋಕೇಶ್ವರ ಜಾತ್ರಾ ಮಹೋತ್ಸವ ಫೆ.15ರಿಂದ ಮಾರ್ಚ್ 23ರವರೆಗೆ ವಿಜೃಭಂಣೆಯಿಂದ ನಡೆಯಲಿದೆ. ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನೆಲೆಸಿರುವ ಭಕ್ತರ ಮಹಾಪೂರವೇ ಹರಿದು ಬರಲಿದೆ.
- ಜಾತ್ರೆಯ ಅಂಗವಾಗಿ ಫೆ.15ರಂದು ಕಳಸ ಮತ್ತು ನಂದಿಕೋಲು ಮೆರವಣಿಗೆ,
- ಫೆ.16ರಂದು ನಂದಿಕೋಲು ಉತ್ಸವ, ಫೆ.17ರಂದು ಗ್ರಾಮದೇವತೆಗೆ ಉಡಿ ಅರ್ಪಣೆ,
- ಫೆ.18ರಂದು ಮಹಾಶಿವರಾತ್ರಿ ನಿಮಿತ್ತ ಶ್ರೀ ಲೋಕೇಶ್ವರನಿಗೆ ವಿಶೇಷಪೂಜೆ, ಅಭಿಷೇಕ, ಸಂಜೆ 6ಕ್ಕೆ ಅಯ್ಯಪ್ಪಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಶಿವಭಜನೆ, ಚೌಡಕಿ,
- ಫೆ.19ರಂದು ಸಾಯಂಕಾಲ 5ಕ್ಕೆ ಮಹಾ ರಥೋತ್ಸವ ಜರಗಲಿದೆ. ಫೆ.23ರಂದು ಕಳಸ ಇಳಿಸುವದು. ಕುಸ್ತಿ ನಂತರ ಮಾನ-ಪಾನ ಕಾರ್ಯಕ್ರಮ ನಡೆಯಲಿದೆ. ಫೆ.19ರಿಂದ 23ರವರೆಗೆ ಬರುವ ಸಕಲ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.
ಈ ಜಾತ್ರಾ ಮಹೋತ್ಸವ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತು ಪಟ್ಟಣದ ಗಣ್ಯರಾದ ಲೋಕಣ್ಣ ಚನ್ನಪ್ಪ ಉದಪುಡಿ ಅವರ ಸಹಕಾರದೊಂದಿಗೆ ಜಾತ್ರಾ ಕಮಿಟಿ ಅಧ್ಯಕ್ಷರಾದ ಕಿರಣರಾವ್ ಮೋಹನರಾವ್ ದೇಸಾಯಿ ಇವರ ನೇತೃತ್ವದಲ್ಲಿ ಜರುಗಲಿದೆ.
ಶ್ರೀ ಲೋಕೇಶ್ವರ ಜಾತ್ರೆಯ ಕಾರ್ಯಕ್ರಮಗಳು:
ಜಾತ್ರೆಯ ಅಂಗವಾಗಿ ಫೆ.15ರಂದು ಕಳಸ ಮತ್ತು ನಂದಿಕೋಲು ಮೆರವಣಿಗೆ, ಫೆ.16ರಂದು ನಂದಿಕೋಲು ಉತ್ಸವ, ಫೆ.17ರಂದು ಗ್ರಾಮದೇವತೆಗೆ ಉಡಿ ತುಂಬುವುದು, ಫೆ.18ರಂದು ಮಹಾಶಿವರಾತ್ರಿ ನಿಮಿತ್ತ ಶ್ರೀ ಲೋಕೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಸಂಜೆ 6ಕ್ಕೆ ಅಯ್ಯಪ್ಪಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಶಿವಭಜನೆ ಹಾಗೂ ಚೌಡಕಿ ಪದ ನಡೆಯಲಿದೆ. ಫೆ.19ರಂದು ಸಾಯಂಕಾಲ 5ಕ್ಕೆ ಮಹಾ ರಥೋತ್ಸವ ಜರಗಲಿದೆ. ಫೆ.23ರಂದು ಕಳಸ ಇಳಿಸುವದು. ಕುಸ್ತಿ ನಂತರ ಮಾನ-ಪಾನ ಕಾರ್ಯಕ್ರಮ ನಡೆಯಲಿದೆ.
ಜಾತ್ರೆಯ ಅಂಗವಾಗಿ ವಿಶೇಷ ಸ್ಪರ್ಧೆಗಳು:
ಫೆ.20ರಂದು ರಂಗೋಲಿ ಸ್ಪರ್ಧೆ, ಫೆ.21ರಂದು ತೆರೆಬಂಡಿ ಸ್ಪರ್ಧೆ ಮತ್ತು ಸುತಬಂಡಿ ಸ್ಪರ್ಧೆ, ಫೆ.22ರಂದು ಒಂದು ನಿಮಿಷದ ಚಕ್ಕಡಿ ಸ್ಪರ್ಧೆ ಹಾಗೂ ಫೆ.23ರಂದು ಚಕ್ಕಡಿ ಸ್ಪರ್ಧೆ ಒಂದು ಎತ್ತು ಒಂದು ಕುದುರೆ, ಚಕ್ಕಡಿ ಶರತ್ತು ಮತ್ತು ಕುಸ್ತಿ ಸ್ಪರ್ಧೆಗಳು ಜರುಗಲಿವೆ.
ಅನ್ನಪ್ರಸಾದ:
ಫೆ.19ರಿಂದ 23ರವರೆಗೆ ಬರುವ ಸಕಲ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ಲೋಕೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಕಮಿಟಿ ವಿನಂತಿಸಿದೆ.