Director Bhagavan Died: ಕನ್ನಡ ಖ್ಯಾತ ನಿರ್ದೇಶಕ ಭಗವಾನ್ ವಿಧಿವಶ


ಕನ್ನಡ ನಿರ್ದೇಶಕ ಭಗವಾನ್ ಅವರು ನಿಧನರಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ( ಫೆಬ್ರವರಿ 20 ) 90 ವರ್ಷದ ಭಗವಾನ್ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು ಭಗವಾನ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದೊರೈ ಭಗವಾನ್ ಜೋಡಿ ಭಾರೀ ಫೇಮಸ್ ಆಗಿತ್ತು. ಬಿ ದೊರೈ ರಾಜ್ ಹಾಗೂ ಎಸ್ ಕೆ ಭಗವಾನ್ ಅವರು ಒಟ್ಟಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ದೊರೈ ರಾಜ್ ಅವರು 2000ರಲ್ಲಿ ನಿಧನರಾಗಿದ್ದರು. ಈ ಜೋಡಿ ಒಟ್ಟಿಗೆ 27 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಡಾ ರಾಜ್‌ಕುಮಾರ್ ಜೊತೆ ಇವರು ಮಾಡಿರುವ ಸಿನಿಮಾಗಳೆಲ್ಲವೂ ಹಿಟ್ ಆಗಿವೆ.

1966 ರಲ್ಲಿ ಬಂದ ʼಸಂಧ್ಯಾರಾಗʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಿರ್ದೇಶಕರಾಗಿ ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ ಬೆಳಕುʼ, ʼಆಪರೇಷನ್‌ ಡೈಮಂಡ್‌ ರಾಕೆಟ್‌ʼ, ʼಜೇಡರ ಬಲೆʼ, ʼಗೋವಾದಲ್ಲಿ ಸಿಐಡಿ999ʼ, ಹೀಗೆ ಅನೇಕ ಚಿತ್ರಗಳನ್ನು ಮಾಡಿ ಸೂಪರ್‌ ಹಿಟ್‌ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಡಾ. ರಾಜ್ ಕುಮಾರ್‌ ಅವರೊಂದಿಗೆ ಬಂದ ಭಗವಾನ್‌ ಅವರ ಸಿನಿಮಾಗಳು ಆ ಕಾಲದಲ್ಲಿ ಮೋಡಿ ಮಾಡಿತ್ತು.  2019 ರಲ್ಲಿ ಸಂಚಾರಿ ವಿಜಯ್‌ ಅವರ ʼಆಡುವ ಗೊಂಬೆʼ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ನಿರ್ದೇಶಕ ದೊರೈರಾಜ್‌ ಜೊತೆಗೂಡಿ ಅನೇಕ ಚಿತ್ರಗಳಿಗೆ ಆ್ಯಕ್ಷನ್ ಕಟ್‌ ಹೇಳಿದ್ದರು.  ದೊರೈ – ಭಗವಾನ್‌ ಎಂದೇ ಇವರು ಖ್ಯಾತಿಯಾಗಿದ್ದರು.

ಭಗವಾನ್ ಹುಟ್ಟಿದ್ದು ಜುಲೈ 5, 1993ರಲ್ಲಿ. ಅವರು ಪ್ರೌಢಶಿಕ್ಷಣವನ್ನು ಬೆಂಗಳೂರನಲ್ಲಿ ಪಡೆದರು. ಭಗವಾನ್​ ನಾಟಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರು ಸಹಾಯಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ಭಾಗ್ಯೋದಯ’ (1956). 1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಆದರೆ, ಇದರ ಕ್ರೆಡಿಟ್​ನ ಎ.ಸಿ. ನರಸಿಂಹಮೂರ್ತಿಗೆ ನೀಡಲಾಯಿತು.

ಕನ್ನಡಕ್ಕೆ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ್ದು ದೊರೈ ಭಗವಾನ್. 1968ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ.

ನವೀನ ಹಳೆಯದು