ಶಿವರಾತ್ರಿಯ ದಿನವಾದ ಶನಿವಾರ ಸಂಜೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಪ್ರಕರಣ ನಡೆದ 48 ಗಂಟೆಗಳಲ್ಲಿ ಪತ್ತೇ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಎ ವಿದ್ಯಾರ್ಥಿ ಕೃಷ್ಣಾ ಹೆಳವರ ಎಂಬಾತ ನಗರದ ಸಿಬಿಎಸ್‌ಇ ಶಾಲಾ ರಸ್ತೆಯಲ್ಲಿ ಚಹಾ ಕುಡಿಯಲು ಬಂದಾಗ ಆತನ ಮೇಲೆ ಇಬ್ಬರು ಯುವಕರು ಬಂದು ಚೂರಿ ಇರಿದಿದ್ದರು. ಪ್ರಕರಣದಲ್ಲಿ ಆರೋಪಿಗಳ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ ಚೂರಿ ಇರಿತದ ಮಟ್ಟಿಗೆ ಪ್ರಕರಣ ಸಂಭವಿಸಲು ಯಾವ ಕಾರಣಗಳು ಇದೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಗೆ ಬರಬೇಕಿದೆ.