ನಮ್ಮ ಮುಧೋಳದ ಈ ಶುಭ ಘಟನೆಗೆ ಇಂದಿಗೆ 75 ವರ್ಷ.


ಮುಧೋಳ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 565 ಸಂಸ್ಥಾನಗಳನ್ನು ಸ್ವತಂತ್ರ ಭಾರತಕ್ಕೆ ಒಗ್ಗೂಡಿಸುವ ದೊಡ್ಡ ಕಾರ್ಯವನ್ನು ಸರ್ದಾರ್ ಪಟೇಲರಿಗೆ ನೀಡಲಾಯಿತು. ಇದರ ತರವಾಯ ಪಟೇಲರು ದೇಶಾದ್ಯಂತ ಸಂಚರಿಸಿ ಎಲ್ಲಾ ರಾಜರನ್ನು ಭಾರತದ ಒಕ್ಕೂಟಕ್ಕೆ ಸೇರುವಂತೆ ಮನವೊಲಿಸಿದರು. ಮೋಂಡುತನದ ಹೈದರಾಬಾದ್‌ ಪ್ರಾಂತ್ಯದ ರಾಜ‌ ನಿಜಾಮ ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದರು. ಇದರಿಂದಾಗಿ ಹೈದರಾಬಾದ್‌ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು‌. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು.

ನಿಮಗಿದು ಗೊತ್ತೇ..!

ಮುಧೋಳ ಸಂಸ್ಥಾನದ ನಕ್ಷೆಗೂ ಹಾಗೂ ಸ್ವಾತಂತ್ರ್ಯ ನಂತರ ರೂಪಗೊಂಡ ಮುಧೋಳ ತಾಲೂಕಿನ ನಕ್ಷೆಯ ಆಕಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು. ಆಗ ಸರ್ದಾರ್ ವಲ್ಲಭಭಾಯಿ ಪಟೇಲ್‌ ಹಾಗೂ ಅಂಬೇಡ್ಕರ್ ಸೇರಿ 'ಆಪರೇಷನ್‌ ಪೊಲೋ' ಹೆಸರಿನಲ್ಲಿ ಪೊಲೀಸ್ ಕಾರ್ಯಚರಣೆ ನಡೆಸಿ, ಹೈದರಾಬಾದ್ ನಿಜಾಮನ ಹುಟ್ಟಡಗಿಸಿದರು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಚತರುತೆ ಹಾಗೂ ಉಕ್ಕಿನ ಮನುಷ್ಯ ಪಟೇಲ್ ಅವರ ಗಟ್ಟಿತನದಿಂದ ಹೈದರಾಬಾದ್‌ ಕರ್ನಾಟಕ ವಿಮೋಚನೆಗೊಂಡಿದೆ ಎಂದು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ.

ಹಾಗೆಯೇ ಭಾರತದ ಒಕ್ಕೂಟ ಸರ್ಕಾರದ ಗೌರವದೊಂದಿಗೆ ಭಾರತದ ಒಕ್ಕೂಟಕ್ಕೆ ಸೇರಿಕೊಂಡ ಪ್ರಮುಖ ಸಂಸ್ಥಾನಗಳಲ್ಲಿ ಮರಾಠ ಸಂಸ್ಥಾನಗಳು ಪ್ರಮುಖ, ಅವುಗಳಲ್ಲಿ ಮುಧೋಳ, ಜಮಖಂಡಿ, ರಾಮದುರ್ಗ, ಕೊಲ್ಹಾಪುರ, ಜತ್ತ, ಕುಂದರವಾಡ, ಮೀರಜ್, ಫಾಲ್ಟಾನ್, ಸಾಂಗಲಿ, ಅಕ್ಕಲಕೋಟೆ, ಔಮದ, ಭೋರ್, ಸವಣೂರ, ಸಾವಂತವಾಡಿ & ವಾಡಿ.

ಇಡೀ ದೇಶಕ್ಕೆ ಸ್ವಾತಂತ್ರ್ಯ ಆಗಸ್ಟ್ 15, 1947 ರಲ್ಲಿ  ಸಿಕ್ಕರೂ ಮುಧೋಳದೊಂದಿಗೆ ಮೇಲಿನ ಎಲ್ಲಾ ಸಂಸ್ಥಾನಗಳು ಮಾತ್ರ ಮಾರ್ಚ್ 8, 1948 ರಂದು ಭಾರತಕ್ಕೆ ಒಕ್ಕೂಟಕ್ಕೆ ಸೇರಿಕೊಂಡವು. ಮುಧೋಳದ ಕೊನೆಯ ಅರಸರಾದ ಭೈರವಸಿಂಗ್ ಘೋರ್ಪಡೆ ಅವರು ಮಾರ್ಚ್ 8, 1948 ರಂದು ಅಧಿಕೃತವಾಗಿ ಭಾರತ ಒಕ್ಕೂಟಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಮುಧೋಳ ಸಂಸ್ಥಾನವನ್ನು ಭಾರತ ಒಕ್ಕೂಟದೊಂದಿಗೆ ಸೇರ್ಪಡೆಗೊಳಿಸಲಾಯಿತು. ಈ ಶುಭ ಘಟನೆ ನಡೆದು ಇಂದಿಗೆ 75 ವರ್ಷಗಳಾಗಿವೆ.


ರಾಜಾ ಭೈರವಸಿಂಗ್ ಘೋರ್ಪಡೆ

ರಾಜಾ ಭೈರವಸಿಂಹ ಘೋರ್ಪಡೆ

ಮುಧೋಳದ ಕೊನೆಯ ಮತ್ತು 23 ನೇ ಅರಸರಾದ ಭೈರವಸಿಂಗ್ ಘೋರ್ಪಡೆ ಅವರು ಮಾರ್ಚ್ 8, 1948 ರಂದು ಅಧಿಕೃತವಾಗಿ ಭಾರತ ಒಕ್ಕೂಟಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಮುಧೋಳ ಸಂಸ್ಥಾನವನ್ನು ಭಾರತ ಒಕ್ಕೂಟದೊಂದಿಗೆ ಸೇರ್ಪಡೆಗೊಳಿಸಿ, ರಾಜನಾದರೂ ಯಾವುದೇ ಅಹಂ ಇಲ್ಲದೇ ಭೈರವಸಿಂಹ ಮಹಾರಾಜರು ಭಾರತೀಯ ಸೇನೆಗೆ ಸೇವೆ ಸಲ್ಲಿಸಿದರು ಮತ್ತು ಇವರ ಸಹೋದರ ವಸಂತರಾಜೆ ಪುಣೆಯಲ್ಲಿ ಪೊಲೀಸ್ ಇಲಾಖೆಗೆ ವಿಶೇಷ ಅಪರಾಧ ಅಧಿಕಾರಿಯಾಗಿ ಸೇರಿದರು.

ರಾಜಾ ಭೈರವಸಿಂಹ ಘೋರ್ಪಡೆ ಸಹೋದರ ವಸಂತರೋರಾಜೆ ಘೋರ್ಪಡೆ

ಮುಧೋಳ ಬಗೆಗೆ ಅಪಾರ ಪ್ರೀತಿ ಮತ್ತು ಅಭಿವೃದ್ಧಿ ಕನಸ್ಸು ಹೊತ್ತಿದ್ದ ಭೈರವಸಿಂಹ ಮಹಾರಾಜರು ಮುಧೋಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ನಂತರವೂ ಸದಾ ಮುಧೋಳ ಅಭಿವೃಧ್ದಿ ಮಾಡುವುಕ್ಕಾಗಿ ಯಾವುದಾದರೂ ಒಂದು ಮಹತ್ಕಾರ್ಯ ಮಾಡಬೇಕೆಂಬ ಹುಮ್ಮಸಿನಲ್ಲಿದ್ದರು, ಆದರೆ ವಿಧಿಯಾಟವೆ ಬೇರೆ ಇತ್ತು ಯಾಕಂದ್ರೆ ಆ ಮಹಾನ್ ವ್ಯಕ್ತಿ ಮುಧೋಳದ ಕೊನೆಯ ಅರಸರಾದ ಭೈರವಸಿಂಗ್ ಘೋರ್ಪಡೆ ಅವರು ಪುಣೆ ಹತ್ತಿರ 1984 ರಲ್ಲಿ ಕಾರು ರಸ್ತೆ ಅಪಘಾತದಲ್ಲಿ  ಮರಣ ಹೊಂದಿದರು.

ಭೈರವಸಿಂಹ ಮಹಾರಾಜರ ಧರ್ಮಪತ್ನಿ ಇಂದಿರಾಜೆ ಘೋರ್ಪಡೆ

ಇತ್ತೀಚೆಗೆ ಭೈರವಸಿಂಹ ಮಹಾರಾಜರ ಧರ್ಮಪತ್ನಿಯಾದ ಇಂದಿರಾಜೆ ಘೋರ್ಪಡೆ ಅವರು ಕೂಡ ಡಿಸೆಂಬರ್ 10, 2022 ರಂದು ವಯೋ ಸಹಜವಾಗಿ ಇಹಲೋಕವನ್ನು ತ್ಯಜಿಸಿದರು. ರಾಜಾ ಭೈರವಸಿಂಹ ಅವರಿಗೆ ಮೇನಕಾ ರಾಜೇ ಎಂಬ ಮಗಳಿದ್ದು ಅವರು ವಿಜಯಸಿಂಹ ಮೌರ್ಯ ಅವರನ್ನು ವಿವಾಹವಾಗಿದ್ದಾರೆ.

ರಾಜಾ ಭೈರವಸಿಂಹ ಅವರ ಮಗಳು ಮೇನಕಾ ರಾಜೇ ಹಾಗೂ ಅಳಿಯ ವಿಜಯಸಿಂಹ ಮೌರ್ಯ

ದಿ ಮುಧೋಳ ಹೌಸ್ ಎಂದೇ ಪ್ರಖ್ಯಾತಿ ಪಡೆದಿರುವ ಪುಣೆಯ ಮುಧೋಳ ರಾಜಮನೆತನದ ಬಂಗಲೆ

ಪುಣೆಯಲ್ಲಿರುವ ರಾಯಲ್ ಮುಧೋಳ ಆಸ್ಪತ್ರೆ

ನವೀನ ಹಳೆಯದು