ಮುಧೋಳ : ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿ. 21 ರಂದು ಆಗಮಿಸುತಿದ್ದು, ಸಾಯಂಕಾಲ 4ಕ್ಕೆ ರನ್ನ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಏತ ನೀರಾವರಿ ಯೋಜನೆಗಳು, ರಸ್ತೆಗಳು, ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಮನೆಗಳ ನಿರ್ಮಾಣ, ಮಿನಿ ವಿಧಾನಸೌಧ ಲೋಕಾರ್ಪಣೆ ಸೇರಿ, ಸಾವಿರಾರು ಕೋಟಿ ವೆಚ್ಚದ ಒಟ್ಟು 47 ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರರೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ರಾಜ್ಯದ ಸಚಿವರು, ಅವಳಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಕಾರಜೋಳ ವಿವರಿಸಿದರು.
ಸಿ.ಎಂ.ಭೇಟಿಯ ಹಿನ್ನಲೆಯಲ್ಲಿ ರನ್ನ ಕ್ರೀಡಾಂಗಣದಲ್ಲಿ ವ್ಯಾಪಕ ಸಿದ್ಧತೆಗಳು ನಡೆದಿದ್ದು ಹೆಲಿಪ್ಯಾಡ ಸೇರಿದಂತೆ ಭವ್ಯ ಶಾಮಿಯಾನಾ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಇನ್ನಿತರ ಎಲ್ಲ ವ್ಯವಸ್ಥೆಗಳು ಭರದಿಂದ ಸಾಗಿವೆಂದು ಸಂಘಟಕರಾದ ಅರುಣ ಕಾರಜೋಳ ಹಾಗೂ ರಾಜು ಯಡಹಳ್ಳಿ ತಿಳಿಸಿದ್ದಾರೆ. ಇವರೊಂದಿಗೆ ಇತರ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.