ಮುಧೋಳ : ತಾಲ್ಲೂಕಿನ ಮಾಚಕನೂರ (ವಜ್ರಮಟ್ಟಿ) ಪುನರ್ವಸತಿ ಕೇಂದ್ರದಲ್ಲಿ ಶ್ರೀಹೊಳೆಬಸವೇಶ್ವರ ದೇವಸ್ಥಾನ, ಮಹಾದ್ವಾರ ಮತ್ತು ರಾಜಗೋಪುರ ಮತ್ತು ಬಹುಪಯೋಗಿ ಸಭಾಭವನ ನಿರ್ಮಾಣ ಮಾಡುವ ಕಾಮಗಾರಿಗೆ ರೂ.9.71 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಅಳವಡಿಸಲು ಈ ಮೊದಲು ಕೃಷ್ಣಾಭಾಗ್ಯ ಜಲ ನಿಗಮದ ಕಛೇರಿ ಪತ್ರದಲ್ಲಿ ಸೂಚಿಸಿದ್ದನ್ನು ಮಾರ್ಪಡಿಸಿ, ಪ್ರಸ್ತುತ 2022-23ನೇ ಸಾಲಿನಲ್ಲಿ ವಾರ್ಷಿಕ ಕ್ರಿಯಾಯೋಜನೆಯ ಉಳಿತಾಯದಲ್ಲಿ ಅಳವಡಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಅನುಮೋದಿತ 2022-23ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿಯೇ ಬಹುಪಯೋಗಿ ಸಭಾಭವನ ನಿರ್ಮಾಣ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಶ್ರೀಹೋಳಬಸವೇಶ್ವರ ದೇವಸ್ಥಾನವು ಜಿಲ್ಲೆಯ ವಿಶೇಷವಾಗಿ ಮುಧೋಳ ತಾಲ್ಲೂಕಿನ ಶ್ರದ್ಧಾಕೇಂದ್ರವಾಗಿದ್ದು, ಈ ಶ್ರದ್ಧಾಕೇಂದ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಈ ಸಭಾಭವನ ಮತ್ತು ಇತರೆ ಕಾಮಗಾರಿಗಳು ಅನುಕೂಲ ಕಲ್ಪಿಸಲಿವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.