ಮುಧೋಳ: ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮ ಪಂಚಾಯಿತಿ ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸುವ ಸದುದ್ದೇಶದಿಂದ ಮಂಟೂರು ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ, ರಾಜೀವ್ ಗಾಂಧಿ ಸಶಕ್ತಿ ಕರಣ, ಶಾಸಕರ ಅನುದಾನ, ವಿಧಾನ ಪರಿಷತ್ ಸದಸ್ಯರುಗಳ ಅನುದಾನ, ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ, ಮತ್ತು ಗ್ರಾಮ ಪಂಚಾಯಿತಿಯ ಇತರೆ ಅನುದಾನಗಳ ಒಗ್ಗೂಡಿಸುವಿಕೆ ಮೂಲಕ 2 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿದ್ದು.
ಮಾನ್ಯ ಶ್ರೀ ಬಸವರಾಜ್ ಎಸ್ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಸಚಿವ ಶ್ರೀ ಗೋವಿಂದ್ ಕಾರಜೋಳ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಆಡಳಿತಾಧಿಕಾರಿಗಳು, ಹಾಗೂ ಎಲ್ಲ ಜನಪ್ರತಿನಿಧಿಗಳು ಮತ್ತು ಎಲ್ಲಾ ಅಧಿಕಾರಿಗಳ ಅಮೃತ ಹಸ್ತದಿಂದ ದಿನಾಂಕ 21/03/2023 ರಂದು ಉದ್ಘಾಟನೆಗೊಂಡಿತು.
"ಗ್ರಾಮಸ್ವರಾಜ್ಯ ಸೌಧ" ಮಂಟೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ವಿಹಂಗಮ ನೋಟ.
ಸದರಿ ಕಟ್ಟಡದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಆಗುವ ರೀತಿಯಲ್ಲಿ ಸದರಿ ಕಟ್ಟಡದಲ್ಲಿ ಗ್ರಾಮ ಮಟ್ಟದ ಎಲ್ಲಾ ಕಾರ್ಯಾಲಯಗಳನ್ನು ಒಗ್ಗೂಡಿಸಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ಮಹತ್ವಕಾಂಕ್ಷೆ ಯಾಗಿದೆ.
ಯಾವೆಲ್ಲಾ ಕಚೇರಿಗಳು ಇವೆ?
ಪೋಸ್ಟ್ ಆಫೀಸ್, ಕೃಷಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ, ಸಕಾಲ, ಕೆಇಬಿ ಟ್ಯಾಕ್ಸ್ ಆಫೀಸ್, ಡಿಜಿಟಲ್ ಲೈಬ್ರರಿ ಗ್ರಂಥಾಲಯ, ಮಹಿಳಾ ಸಂಘಗಳಿಗೆ ಕಾರ್ಯಾಲಯ, ಸಭಾಭವನ, ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಗ್ರಾಮೀಣ ಅಭಿವೃದ್ಧಿ ಇಲಾಖೆ ನಡೆದುಬಂದ ಚಿತ್ರ ಗ್ಯಾಲರಿ, ಗಾಂಧೀಜಿಯ ಪ್ರತಿಮೆ, ವಾಟರ್ ಪಂಟೇನ್, ಹಿರಿಯನಾಗರಿಕರ ವಿಶ್ರಾಂತಿ ತಾಣ, ಚಿಕ್ಕಮಕ್ಕಳಿಗೆ ಉದ್ಯಾನವನ, ಗ್ರಾಮಸಭೆ ಕಟ್ಟೆ, ಗೊಡವನ್, ಮಳೆ ನೀರು ಕೊಯ್ಲು, ವೈಫೈ, ಸಿಸಿಟಿವಿ ಕಣ್ಗಾವಲು, ಕರ್ನಾಟಕ ಸರ್ಕಾರದ ಲಾಂಛನದ ಪ್ರತಿಮೆ, ಉದ್ಯಾನವನ ನಿರ್ಮಾಣ, ಪುಟ್ಬಾತ್, ಕುಡಿಯುವ ನೀರು, ಹೈಟೆಕ್ ಶೌಚಾಲಯ, ಪ್ರೊಜೆಕ್ಟರ್, ಎಲ್ಇಡಿ ಟಿವಿ, ಎಟಿಎಂ ಸೇವೆ, ಜೆರಾಕ್ಸ್, ಸಹಾಯವಾಣಿ, ದೂರು ಕೌಂಟರ್, ರೆಕಾರ್ಡ್ ರೂಮ್, ತರಬೇತಿ ಕೇಂದ್ರ, ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ ಈ ಗ್ರಾಮ ಸ್ವರಾಜ್ಯ ಸೌಧ.