ಮುಧೋಳ : ಸಾಲ ಪಡೆದು ವಾಹನ ಖರೀದಿಸಿದಾಗ ಕಂತು ಕಟ್ಟಿಲ್ಲ. ಅಂದ ಮಾತ್ರಕ್ಕೆ ನೋಟೀಸು ನೀಡದೇ ವಾಹನ ಜಪ್ತಿ ಮಾಡುವಂತಿಲ್ಲ ಎಂದು ಜಿಲ್ಲಾ ಗಾಹಕರ ಆಯೋಗ ತಿಳಿಸಿ ಇಂತಹ ಪ್ರಕರಣದಲ್ಲಿ ವಾಹನ ಜಪ್ತಿ ಮಾಡಿದ ಸಂಸ್ಥೆಗೆ ದಂಡ ವಿಧಿಸಿದೆ.
ಮುಧೋಳ ತಾಲೂಕಿನ ಭಂಟನೂರ ಗ್ರಾಮದ ಕಲ್ಲಪ್ಪ ಶ್ಯಾಮಪ್ಪ ಕುಂಬಾರ ಎಂಬುವರು ಜೀವನೋಪಾಯ ಸಲುವಾಗಿ 2018 ರಲ್ಲಿ ಮುಧೋಳ ಐಡಿಎಫ್ ಸಿ ಬ್ಯಾಂಕಿನಲ್ಲಿ ರೂ. 5,88,703 ಸಾಲ ಮಾಡಿ ಗೂಡ್ಸ್ ಗಾಡಿ ಖರೀದಿಸಿದ್ದು ಸಕಾಲಕ್ಕೆ ಕಂತು ಪಾವತಿಸಿದ್ದಾರೆ.
ಆದರೆ ಕೋವಿಡ್ ಸಂದರ್ಭದಲ್ಲಿ ಮಾತ್ರ ಕಷ್ಟವಾದರೂ ಬ್ಯಾಂಕ್ ಒತ್ತಡದಿಂದಾಗಿ ಆಗಲೂ ಕಟ್ಟಿದ್ದಾರೆ ಆದರೆ ಮುಂದೆ 2021ರಲ್ಲಿ ಡಿಸೆಂಬರ್‌ನಲ್ಲಿ ಕಂತು ಕಟ್ಟದಿದ್ದಾಗ ವಾಹನ ಜಪ್ತಿ ಮಾಡಿದ್ದು ಇದರ ಅವರು ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಸಮಗ್ರ ವಿಚಾರಣೆ ನಡೆಸಿ ಬ್ಯಾಂಕ್ ವಾಹನವನ್ನು ಜಪ್ತಿ ಮಾಡಿ ಬೇರೆ ಅವರಿಗೆ ಮಾರಿದಕ್ಕೆ ತಪ್ಪು ಎಂದು ಹೇಳಿದೆ.
ವಿಚಾರಣೆ ನಡೆಸಿದ ಆಯೋಗ ಅನುಚಿತ ವ್ಯಾಪಾರ ಪದ್ಧತಿ ಅಂತಾ ತೀರ್ಮಾನಿಸಿ ಅಧ್ಯಕ್ಷರು ವಿಜಯಕುಮಾರ ಪಾವಲೆ, ಸದಸ್ಯರುಗಳಾದ ದಂಡಣ್ಣವರ ರಂಗನಗೌಡ ಶ್ರೀಮತಿ ಹಾಗೂ ಸಮಿವುನ್ನೀಸಾ ಅಬ್ರಾರ ಅವರಿದ್ದ ನ್ಯಾಯಪೀಠ ಎದುರುದಾರರು ದೂರುದಾರರಿಗೆ ದೂರು ದಾಖಲಿಸಿದ ದಿನದಿಂದ ಶೇಕಡಾ ರೂ 6/-ರಂತೆ ರೂ. 50,000/- ಪರಿಹಾರವನ್ನು ಆದೇಶವಾದ ದಿನದಿಂದ 45 ದಿನದೊಳಗೆ ಕೊಡಬೇಕು ತಪ್ಪಿದಲ್ಲಿ ಶೇಕಡಾ ರೂ 9 ರಂತೆ ಬಡ್ಡಿ ಸಮೇತ ಕೊಡಬೇಕು ಇದಲ್ಲದೆ ಮಾನಸಿಕ ವ್ಯಥೆ ಗೆ ರೂ. 5000/- ದಾವಾ ವೆಚ್ಚ ರೂ. 2000/- ಗಳನ್ನು ಕೊಡಬೇಕು ಎಂದು ಆದೇಶ ಹೊರಡಿಸಿದೆ.
ದೂರುದಾರರಿಗೆ ಸಾಲ ತೀರಿದ ಪ್ರಮಾಣ ಪತ್ರ ಕೊಡಬೇಕು ಹಾಗು ದೂರುದಾರರು ಹೆಸರು ವರ್ಗಾವಣೆಗೆ ನಿರಾಪೇಕ್ಷಣಾ ಪತ್ರ ಕೊಡಬೇಕು ಎಂದೂ ಆದೇಶದಲ್ಲಿ ತಿಳಿಸಿದೆ.