ನೂತನ ತಾಲೂಕಾಡಳಿತ ಭವನದ ಸಂಪೂರ್ಣ ಮಾಹಿತಿ


ಮುಧೋಳ: ಅಂದಾಜು 40*60 ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಅನೇಕ ವ್ಯವಸ್ಥೆಗಳನ್ನು ಒಳಗೊಂಡಿದೆ. ಎರಡು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡದಲ್ಲಿ ಬಹುತೇಕ 15ರಿಂದ 20 ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ನೆಲ ಮಹಡಿ ಮಹಡಿ ಬಹುತೇಕವಾಗಿ ತಹಸೀಲ್ದಾರ್ ಕಚೇರಿಗೆ ಮೀಸಲಿರಲಿದೆ.

ಕೋರ್ಟ್‍ ಹಾಲ್‍, ಕ್ಯಾಂಟೀನ್‍, ಕಚೇರಿ ಸಿಬ್ಬಂದಿ ಕೊಠಡಿ ಸೇರಿ ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ಇಲ್ಲಿ ನಡೆಯುತ್ತವೆ. ಮೊದಲ ಮಹಡಿಯಲ್ಲಿ ಭೂ ಮಾಪಕರ, ಖಜಾನೆ ಅಧಿಕಾರಿ ಹಾಗೂ ಲೆಕ್ಕ ಪತ್ರ ಪರಿಶೋಧಕರ ಕಚೇರಿ ಸೇರಿದಂತೆ ಹಲವು ಕಚೇರಿ ಅಧಿಕಾರಿಗಳ ಕೆಲಸ ನಿರ್ವಹಿಸಲಿದ್ದಾರೆ.

ಇನ್ನು ಎರಡನೇ ಮಹಡಿಯಲ್ಲಿ ಅಬಕಾರಿ ಇಲಾಖೆ ಸೇರಿದಂತೆ ಇನ್ನು ಹಲವು ಕಚೇರಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಕಟ್ಟಡ ನಗರದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಉದ್ದೇಶ

ಗ್ರಾಮೀಣ ಹಾಗೂ ನಗರದ ಜನರಿಗೆ ಸರಕಾರಿ ಸೌಲಭ್ಯಗಳು ಒಂದೇ ಕಡೆ ಸಿಗಲಿ ಎಂಬ ಉದ್ದೇಶದೊಂದಿಗೆ ನಗರದಲ್ಲಿ 'ತಾಲೂಕಾಡಳಿತ ಭವನ' ಶೀಘ್ರವೇ ತಲೆ ಎತ್ತಲಿದೆ.

ವೆಚ್ಚ& ಸದ್ಯದ ಸ್ಥಿತಿ

15 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಪೂರ್ಣಗೊಂಡಿದ್ದು ನಾಳೆ ಉದ್ಘಾಟನೆಗೊಳ್ಳಲಿದ್ದು, ಸಾರ್ವಜನಿಕರ ಸೇವೆಗೆ ಸಿದ್ದಾಗೊಳ್ಳಲಿದೆ.

ಸ್ಥಳ

ನಗರದ ಲೋಕಾಪೂರ ರಸ್ತೆಯ ಶಿಥಿಲಾವಸ್ಥೆಯಲ್ಲಿದ್ದ ಹಳೇ ತಹಸೀಲ್ದಾರ್ ಕಚೇರಿ ನೆಲಸಮಗೊಳಿಸಿ ಅದೇ ಆವರಣದಲ್ಲಿ ನೂತನ ತಾಲೂಕಾಡಳಿತ ಭವನ ನಿರ್ಮಾಣ ಮಾಡಲಾಗಿದೆ.

ಯಾವ್ಯಾವ ಕಛೇರಿಗಳು?

ತಹಸೀಲ್ದಾರ್ ಕಚೇರಿ, ಉಪನೋಂದಣಾಧಿಕಾರಿ, ಉಪಖಜಾನ ಕಚೇರಿ, ಕಂದಾಯ ಕಚೇರಿಗಳು, ಅಬಕಾರಿ, ಬಿಸಿಎಂ ಕಚೇರಿ, ಸಣ್ಣ ನೀರಾವರಿ, ಜಿಎಲ್‌ಬಿಸಿ, ಸಮಾಜ ಕಲ್ಯಾಣ, ಸಿಡಿಪಿಓ,ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತೋಟಗಾರಿಕೆ ಇತರ ಮಹತ್ವದ ಇಲಾಖೆಗಳನ್ನು ಸೇರ್ಪಡೆ ಮಾಡಲಾಗುವುದು.

ತಲುಪುವುದು ಹೇಗೆ

ಸ್ಥಳೀಯ ಆಟೋ ಮತ್ತು ಬಸ್ಸು ಸೇವೆ ಬಳಸಿಕೊಂಡು ಈ ಆಡಳಿತ ಭವನವನ್ನು ತಲುಪಬಹುದು. ಸ್ವಂತ ವಾಹನ ಹೊಂದಿರುವವರು ಕೆಳಗಿನ ಲಿಂಕ್ ಬಳಸಿ ಗೂಗಲ್ ನ ನಕ್ಷೆಯ ಸಹಾಯದೊಂದಿಗೆ ತೆರಳಬಹುದು.
ನವೀನ ಹಳೆಯದು