ಮುಧೋಳ: ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲ ದಿನವಾದ ಗುರುವಾರದಂದು ಜಿಲ್ಲೆಯ ಏಳು ಮತಕ್ಷೇತ್ರ ಸೇರಿ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ.
ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ ಬಾಗಲಕೋಟೆ, ಮುಧೋಳ ಹಾಗೂ ಬಾದಾಮಿ ಮತಕ್ಷೇತ್ರ ಹೊರತುಪಡಿಸಿ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ. ತೇರದಾಳ ಮತಕ್ಷೇತ್ರದಿಂದ 2, ಜಮಖಂಡಿ ಮತಕ್ಷೇತ್ರದಿಂದ 3, ಬೀಳಗಿ ಮತಕ್ಷೇತ್ರದಿಂದ 5, ಹುನಗುಂದ ಮತಕ್ಷೇತ್ರದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ.
ತೇರದಾಳ ಕ್ಷೇತ್ರದಿಂದ ಬಿಜೆಪಿಯಿಂದ ಸಿದ್ದಪ್ಪ ಸವದಿ 1, ಆಮ್ ಆದ್ಮಿ ಪಕ್ಷದಿಂದ ಅರ್ಜುನ ಹಲಗಿಗೌಡರ 1, ಜಮಖಂಡಿ ಕ್ಷೇತ್ರದಿಂದ ಪಕ್ಷೇತರದಿಂದ ಸುಶೀಲಕುಮಾರ ಬೆಳಗಲಿ, ರವಿ ಪಡಸಲಗಿ, ಸುರೇಶ ಹಂಚನಾಳ ತಲಾ 1, ಬೀಳಗಿ ಕ್ಷೇತ್ರದಿಂದ ಬಿಜೆಪಿಯಿಂದ ಮುರುಗೇಶ ನಿರಾಣಿ 2 ನಾಮಪತ್ರ, ಆಮ್ ಆದ್ಮಿ ಪಕ್ಷದಿಂದ ಮುತ್ತಪ್ಪ ಕೋಮಾರ 2 ನಾಮಪತ್ರ, ಕೆ.ಆರ್.ಎಸ್ ಪಕ್ಷದಿಂದ ಬಸಲಿಂಗಯ್ಯ ಹೊಂಬಾಳಿಮಠ 1, ಹುನಗುಂದ ಕ್ಷೇತ್ರದಿಂದ ಪಕ್ಷೇತರದಿಂದ ಷಡಕ್ಷರಯ್ಯ ನವಲಿಹಿರೇಮಠ 1 ನಾಮಪತ್ರ ಸಲ್ಲಿಸಿದ್ದಾರೆ.
ಹಾಗೆಯೇ ಕರ್ನಾಟಕದಲ್ಲಿ ಇಂದು ಒಟ್ಟು 179 ನಾಮಪತ್ರಿಕೆಗಳು ಸಲ್ಲಿಕೆಯಾಗಿವೆ.