ಮುಧೋಳ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬಿಜೆಪಿ ಉರಿಯಾಳು ಆಗಿ ಮುಧೋಳು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಾಮಪತ್ರ ಸಲ್ಲಿಕೆ ಮಾಡಿದರು. ರಾಮಣ್ಣ ತಳೇವಾಡ ಸೇರಿದಂತೆ ಬೆರಳೆಣಿಕೆ ನಾಯಕರೊಂದಿಗೆ ಸಾಂಕೇತಿಕವಾಗಿ ತಹಶೀಲದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ನಂತರ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆಗೆ ಮಾತನಾಡುತ್ತಲೇ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾದ ಎಸ್.ಎಸ್.ಮಲಘಾಣ ಅವರನ್ನು ನೆನೆದು ಕಣ್ಣೀರು ಹಾಕಿದರು. ರಾಜ್ಯದಲ್ಲಿ ಏನೇ ಬದಲಾವಣೆಯಾದರೂ ಕ್ಷೇತ್ರದಲ್ಲಿ ಜನ ನನ್ನ ಕೈಬಿಟ್ಟಿಲ್ಲ.
ಈಗಲೂ ಅದೇ ಅಭಿಮಾನವನ್ನು ತೋರುತ್ತಾರೆ. ನಿಸ್ವಾರ್ಥದಿಂದ ದುಡಿದಿದ್ದೇನೆ. ನಾನು ನಿಮ್ಮ ಮನೆ ಮಗ ದುಡಿದಿರುವುದಕ್ಕೆ ಕೂಲಿ ಕೊಡಿ ಎಂದು ಕೇಳುತ್ತೇನೆ. ಕಾಂಗ್ರೆಸ್ ಸೇರಿ ಯಾರೇ ಬಂಡಾಯ ನಿಂತರೂ ತಲೆ ಕೆಡಿಸಿಕೊಳ್ಳುವುದಿಲ್ಲ ಜನ. ನನ್ನ ಕೈ ಬಿಡುವುದಿಲ್ಲ ಎಂಬ ಅಚಲ ನಂಬಿಕೆ ನನ್ನದು ಎಂದು ಹೇಳಿದರು.