ಮುಧೋಳ ನಗರದಲ್ಲಿರುವ ದಿವಂಗತ ನಂದಕುಮಾರ ಪಾಟೀಲ, ಹನಮಂತಗೌಡ ಪಾಟೀಲ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಂದಕುಮಾರ ಕಾಂಗ್ರೆಸ್ ಕಿಸಾನ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬಾಗಲಕೋಟೆ ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿದ್ದರು.
ಹಣಮಂತಗೌಡ ಪಾಟೀಲ ಉದ್ಯಮಿಯಾಗಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಯಾವುದೇ ಹುದ್ದೆ ಹೊಂದಿರಲಿಲ್ಲ.
ಮುದ್ದೇಬಿಹಾಳ ಹತ್ತಿರ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿದ್ದರು. ಕಾರ್ಖಾನೆಯಲ್ಲಿ ಇತ್ತೀಚೆಗೆ ಎಸ್.ಅರ್. ಪಾಟೀಲ ಭಾವಚಿತ್ರ ಇರುವ ಗೋಡೆ ಗಡಿಯಾರ, ಟೀಶರ್ಟ್ ಗಳು ಸಿಕ್ಕಿದ್ದವು.