Discount on Municipality Tax: ಮುಧೋಳ: ನಗರಸಭೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿ ಮಾಲಿಕರು 2023- 24ನೇ ಸಾಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಏ. 30 ರೊಳಗೆ ತುಂಬಿದರೆ ಸರಕಾರದ ಆದೇಶದಂತೆ ಶೇ. 5ರಷ್ಟು ರಿಯಾಯಿತಿಯನ್ನು ನೀಡಲಾಗುವುದು.
ಕಾರಣ ಆಸ್ತಿ ಮಾಲಿಕರು ಆಸ್ತಿ ತೆರಿಗೆ ಪಾವತಿಸಿ ಸದರಿ ರಿಯಾಯಿತಿಯ ಲಾಭ ಪಡೆದುಕೊಂಡು ಸರ್ವತೋಮುಖ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಎಸ್.ಜಿ. ಅಂಬಿಗೇರ, ಅಧ್ಯಕ್ಷ ಮಂಜು ಮಾನೆ ಹಾಗೂ ಉಪಾಧ್ಯಕ್ಷೆ ಸುನೀತಾ ಬೋವಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.