ಮುಧೋಳ : ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮಾಜಿ ಸಚಿವ ಆರ್. ಬಿ. ತಿಮ್ಮಾಪೂರ ಅವರು ಸೋಮವಾರ ತಹಶಿಲ್ದಾರ ಕಚೇರಿಯಲ್ಲಿ ತಮ್ಮ ಕುಟುಂಬ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಚುನಾವಣಾ ಅಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ತಹಶಿಲ್ದಾರ ವಿನೋದ ಹತ್ತಳ್ಳಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಸಮಯದಲ್ಲಿ ಪತ್ನಿ ಶಶಿಕಲಾ, ಪುತ್ರಿ ಸುಮನ, ಕೆಪಿಸಿಸಿ, ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ ರಾಜು ಬಾಗವಾನ ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿದ ನಂತರ ಪಕ್ಷದ ಅಧ್ಯಕ್ಷ ಅಶೋಕ ಕಿವಡಿ ಹಾಗೂ ದಯಾನಂದ ಪಾಟೀಲ ಮಾತನಾಡಿ ಬಿಜೆಪಿ ಪಕ್ಷ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದು ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಅಲೆಯಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ತಿಮ್ಮಾಪೂರ ಬಹುಮತದಿಂದ ಆಯ್ಕೆ ಆಗಲಿದ್ದಾರೆಂಬ ವಿಶ್ವಾಸ ವ್ಯಕ್ತ ಪಡಿಸಿದರು. ಪ್ರಮುಖರಾದ ಎಸ್. ಎಸ್. ಮಲಘಾಣ, ಗಿರೀಶ ಪಾಟೀಲ ಸಿದ್ರಾಮ ಕುರಿ ಮುಂತಾದವರಿದ್ದರು.
ಆಸ್ತಿಗಿಂತಲೂ ಸಾಲವೇ ಹೆಚ್ಚು..
ಕ್ಷೇತ್ರದಲ್ಲಿ ಕಾರಜೋಳರ ಎದುರಾಳಿಯಾಗಿರುವ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಬಕಾರಿ, ಸಕ್ಕರೆ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು ಈ ಬಾರಿ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸುವ ಸಿದ್ಧತೆಯಲ್ಲಿದ್ದಾರೆ. ಹೆಚ್ಚಿನ ಸ್ಥಿರಾಸ್ತಿಯನ್ನೂ ಹೊಂದದ ಅವರು ಆಸ್ತಿಗಿಂತಲೂ ಹೆಚ್ಚಿನ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಒಟ್ಟು 17.48 ಲಕ್ಷ ರೂ.ಗಳ ಚರಾಸ್ತಿಯನ್ನು ತಿಮ್ಮಾಪುರ ಅವರು ಪತ್ನಿ ಹೆಸರಿನಲ್ಲಿ 4.83 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಇನ್ನು ತಮ್ಮ ಹೆಸರಿನಲ್ಲಿ ಮುಧೋಳ ತಾಲೂಕು ಉತ್ತೂರಿನಲ್ಲಿ 9.23 ಎಕರೆ ಭೂಮಿಯನ್ನು ಅವರು ಹೊಂದಿದ್ದು, ಪತ್ನಿ ಹೆಸರಿನಲ್ಲಿ ಆರ್‌ಬಿ ಸಕ್ಕರೆ ಕಾರ್ಖಾನೆಯಲ್ಲಿ 20 ಸಾವಿರ ಮುಖಬೆಲೆ 10 ಶೇರುಗಳನ್ನು ಹೊಂದಿದ್ದಾರೆ.
ಇನ್ನು ಸಚಿವ ತಿಮ್ಮಾಪುರ ಅವರ ಹೆಸರಿನಲ್ಲಿ 34.69 ಲಕ್ಷ ರೂ.ಗಳ ಸಾಲವನ್ನು ತಿಮ್ಮಾಪುರ ಅವರು ಹೊಂದಿದ್ದಾರೆ.